ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೊಳಿ: ನೇಕಾರ ಸಪ್ತಾಹ ಆಚರಣೆ; ಸಾಧಕರಿಗೆ ಗೌರವ

ಮುಲ್ಕಿ: ಕದಿಕೆ ಟ್ರಸ್ಟ್, ನಬಾರ್ಡ್ ಬೆಂಬಲದೊಂದಿಗೆ ನೇಕಾರ ಸಪ್ತಾಹದ ಆಚರಣೆಯನ್ನು ದ. ಕನ್ನಡ. ಮತ್ತು ಉಡುಪಿ ಜಿಲ್ಲೆಯ ನೇಕಾರರಿಗೆ ಕಿನ್ನಿಗೋಳಿ ಸಮೀಪದ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಅನಿಲ ಪ್ರಸಾದ ಹೆಗ್ಡೆ , ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ , ಸೆಲ್ಕೋ ಫೌಂಡೇಶನ್ ಎ ಜಿ ಎಮ್ ಗುರುಪ್ರಕಾಶ್ ಶೆಟ್ಟಿ, ನಬಾರ್ಡ್ ಡಿ ಡಿ ಎಮ್ ಸಂಗೀತ ಕರ್ತ , ನಿವೃತ್ತ ಪ್ರಾಧ್ಯಾಪಕ ಉದಯ ಕುಮಾರ್ ಇರ್ವತ್ತೂರು ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ನೇಕಾರ ಸಾಸಿಹಿತ್ಲು ವ್ಯಾಸರಾಯ ಶೆಟ್ಟಿಗಾರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಳಿಪಾಡಿ ನೇಕಾರ ಸಂಘದ ಹಿರಿಯ ನೇಕಾರರಾದ ಬೂಬ ಶೆಟ್ಟಿಗಾರ ರವರಿಗೆ ಕದಿಕೆ ಟ್ರಸ್ಟ್ ನೇಕಾರಿಕಾ ಕೌಶಲ್ಯ ಕ್ಕೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ನೇಕಾರ ರತ್ನ ಪ್ರಶಸ್ತಿಯನ್ನು ನೀಡಲಾಯಿತು.

ಉಳಿದಂತೆ ವಿಠಲ ಶೆಟ್ಟಿಗಾರ್ ಉಡುಪಿ ಸಂಘ, ಜಾರ್ಜ್ ಅಮ್ಮನ್ನ ಶಿವಳ್ಳಿ ಸಂಘ , ಬೂಬ ಶೆಟ್ಟಿಗಾರ್ ಪಣಂಬೂರು ಸಂಘ, ಮಾಲತಿ ಶೆಟ್ಟಿಗಾರ್ ತಾಳಿಪಾಡಿ ಸಂಘ ರವರಿಗೆ ಕದಿಕೆ ಟ್ರಸ್ಟ್ ನಿರಂತರ ನೇಕಾರಿಕೆಗೆ ಕೊಡಮಾಡುವ ಉತ್ತಮ ನೇಕಾರ ಪ್ರಶಸ್ತಿಯನ್ನೂ ನೀಡಿ ಗೌರವಿಸಲಯಿತು.

ಮಣಿಪಾಲ ಪಾವನ ಆಚಾರ್ಯ ರವರ ವಿಪಾಂಚಿ ಬಳಗ ನಡೆಸಿಕೊಟ್ಟ ವೀಣಾ ವಾದನವು ಯುವ ನೇಕಾರರಿಂದ ರಾಟೆ ಚರಕ ಜುಗಲಬಂದಿಯೊಂದಿಗೆ ನಡೆಯಿತು. ತಾಳಿಪಾಡಿ ನೇಕಾರ ಸಂಘದ ಸದಸ್ಯರು ತಾವೇ ನೇಯ್ದ ಉಡುಪಿ ಸೀರೆಗಳನ್ನು ಧರಿಸಿ ರಾಂಪ್ ವಾಕ್ ಹಾಗೂ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ಎರಡು ಜಿಲ್ಲೆಯ ನೇಕಾರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಕದಿಕೆ ಟ್ರಸ್ಟ್ ಮತ್ತು ತಾಳಿಪಾಡಿ ನೇಕಾರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.

Edited By : PublicNext Desk
Kshetra Samachara

Kshetra Samachara

17/08/2022 08:04 am

Cinque Terre

2.19 K

Cinque Terre

0

ಸಂಬಂಧಿತ ಸುದ್ದಿ