ಕುಂದಾಪುರ: ಸ್ವಾತಂತ್ರ್ಯ ದಿನಾಚರಣೆ ಎನ್ನುವುದು ಕೇವಲ ಆಚರಣೆಯಲ್ಲ, ಅದು ಒಂದು ಸಂಭ್ರಮ. ತನಗಿಷ್ಟ ಬಂದ ರೀತಿಯಲ್ಲಿ ಮಾನವೀಯ ಮೌಲ್ಯಗಳ ಜೊತೆಯಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿರುವುದಕ್ಕೆ ಕುಂದಾಪುರ ತಾಲೂಕಿನ ಸಿದ್ಧಾಪುರ ಹೊಳೆ ಶಂಕರನಾರಾಯಣದ ಕೃಷಿಕ, ಸಮಾಜ ಸೇವಕ, ಬಿ.ಎಡ್. ಪದವೀಧರ ರಾಜೇಂದ್ರ ಬೆಚ್ಚಳ್ಳಿ ಮಾದರಿಯಾಗಿದ್ದಾರೆ.
75ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಮೃತ ಮಹೋತ್ಸವ ಎರಡರ ಸವಿ ನೆನಪಿಗೆ ಹೊಸಂಗಡಿ, ಉಳ್ಳೂರು -74, ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶದ 14 ಸರ್ಕಾರಿ ಶಾಲೆಗಳಿಗೆ, ಹಾಗೂ ಅಂಗನವಾಡಿ ಕೇಂದ್ರ,ಆಶಾ ಕಾರ್ಯಕರ್ತರಿಗೆ, ಪ್ರೌಢಶಾಲೆ ಹಾಗೂ, ಪದವಿ ಪೂರ್ವ ಕಾಲೇಜು ಹಾಗೂ ಶಂಕರನಾರಾಯಣ, ಅಮಾಸೆಬೈಲ್ ಪೊಲೀಸ್ ಠಾಣೆಗಳಿಗೆ ಸಿಹಿ ತಿಂಡಿ ಜತೆಗೆ ರಾಷ್ಟ್ರಧ್ವಜ ವಿತರಿಸಿದ್ದಾರೆ.
ರಾಜೇಂದ್ರ ಬೆಚ್ಚಳ್ಳಿಯವರ ಈ ನಡೆ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
Kshetra Samachara
14/08/2022 12:42 pm