ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ

ಮಂಗಳೂರು: ದೇಶ ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಎಲ್ಲೆಡೆಯೂ ವೈವಿಧ್ಯಮಯ ಕಾರ್ಯಕ್ರಮಗಳಿಂದ ಸಂಭ್ರಮಾಚರಿಸಲಾಗುತ್ತಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಹಿಂದೆ ಬೀಳದೆ ಇಂದು ದೇಶಭಕ್ತಿಯ ವಾತಾವರಣವನ್ನು ಸೃಷ್ಟಿಸಿತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಬೈಕ್ rally ನಡೆಸಿತು. ಅಲ್ಲದೆ, ಪ್ರಯಾಣಿಕರಿಗೆ, ಅವರನ್ನು ಬಿಡಲು ಬಂದಿರುವ ಸಂಬಂಧಿಕರಿಗೆ, ಸ್ನೇಹಿತರಿಗೆ ತ್ರಿವರ್ಣ ಧ್ವಜವನ್ನು ವಿತರಿಸಿದರು. ಪುಟಾಣಿಗಳಿಗೂ ತ್ರಿವರ್ಣ ಧ್ವಜವನ್ನು ವಿತರಿಸಿ, ಉತ್ಸಾಹ ತುಂಬಿದರು.

Edited By : Shivu K
Kshetra Samachara

Kshetra Samachara

12/08/2022 08:40 pm

Cinque Terre

4.06 K

Cinque Terre

0

ಸಂಬಂಧಿತ ಸುದ್ದಿ