ಉಡುಪಿ: ಉಡುಪಿಯಲ್ಲಿವತ್ತು ಅಪೂರ್ವ ಐತಿಹಾಸಿಕ ದೇಶಪ್ರೇಮ ಸಾರುವ ಜಾಥಾವೊಂದು ನಡೆಯಿತು. ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಕ್ರೀಡಾಂಗಣದ ವರೆಗೆ ನಡೆದ ಅಪೂರ್ವ ಮೆರವಣಿಗೆ ಇದು. ಪ್ರತಿ ವಿದ್ಯಾರ್ಥಿಯ ಕೈಯಲ್ಲೂ ತಿರಂಗಾ ರಾಜಿಸುತ್ತಿತ್ತು. ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ದೇಶಪ್ರೇಮ ಜಾಗೃತಿಗಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು. ಶಾಸಕ ರಘುಪತಿ ಭಟ್ ಸಹಿತ ಹಲವರು ಇದರಲ್ಲಿ ಪಾಲ್ಗೊಂಡರು. ಒಂದು ಕಿ.ಮೀ ಗೂ ಹೆಚ್ಚು ದೂರ ಸಾಗಿದ ವಿದ್ಯಾರ್ಥಿಗಳ ಜಾಥಾವು ಬಳಿಕ ಅಜ್ಜರಕಾಡು ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು.
Kshetra Samachara
11/08/2022 05:17 pm