ಮಂಗಳೂರು: ಸಾಧಕರ ಸಮಾಜಮುಖಿ ಬದುಕು ಮತ್ತು ಸಾಧನೆ ಯುವಕರಿಗೆ ಪ್ರೇರಣೆ ಎಂದು ಮಾಜಿ ಮುಖ್ಯಮಂತ್ರಿ ಡಾ|ಎಂ. ವೀರಪ್ಪ ಮೊಯ್ಲಿ ಹೇಳಿದರು. ಕಲಬುರಗಿ ಮತ್ತು ಮಂಗಳೂರು ವಿ.ವಿ.ಗಳಿಂದ ಗೌರವ ಡಾಕ್ಟರೆಟ್ ಪದವಿ ಪಡೆದಿರುವ ನಾಲ್ವರು ಗಣ್ಯರಿಗೆ ಪೌರ ಸಮಾನ ಸಮಿತಿ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಟ್ಟೆ ಪರಿಗಣಿತ ವಿ.ವಿ. ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ವಿ.ವಿ.ಯಿಂದ ಗೌರವ ಡಾಕ್ಟರೆಟ್ ಪಡೆದ ಡಾ| ಯೆನಪೊಯ ಅಬ್ದುಲ್ಲಕುಂಞ , ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೆಟ್ ಪಡೆದ ಡಾ| ಹರಿಕೃಷ್ಣ ಪುನರೂರು, ಡಾ| ದೇವದಾಸ್ ಕಾಪಿಕಾಡ್ ರವರನ್ನು ಅಭಿನಂದನ ಫಲಕ, ಫಲಪುಷ್ಪ, ಸ್ಮರಣಿಕೆ ನೀಡಿ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಸನ್ಮಾನಿಸಿದರು.
ಡಾ| ಹೇಮಾವತಿ ವಿ. ಹೆಗ್ಗಡೆ ಅವರು ಅನಿ ವಾರ್ಯ ಕಾರಣಗಳಿಂದಾಗಿ ಸಮಾರಂಭಕ್ಕೆ ಬರಲಾಗದಿರುವ ಹಿನ್ನಲೆಯಲ್ಲಿ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅವರ ನಿವಾಸಕ್ಕೆ ತೆರಳಿ ಸನ್ಮಾನವನ್ನು ಸಮರ್ಪಿಸಲಾಗುವುದು ಎಂದು ಪ್ರಧಾನ ಸಂಚಾಲಕ ಐವನ್ ಡಿ'ಸೋಜಾ ತಿಳಿಸಿದರು. ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ನಿಟ್ಟೆ ಪರಿಗಣಿತ ವಿ.ವಿ. ಕುಲಪತಿ ಡಾ| ವಿಜಯಕುಮಾರ್, ಶಾಸಕ ಯು.ಟಿ. ಖಾದರ್ ಉಪಸ್ಥಿತರಿದ್ದರು.
Kshetra Samachara
08/07/2022 07:32 am