ಉಡುಪಿ: ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು - ಉಡುಪಿ ಜಿಲ್ಲಾ ಘಟಕ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಅಜ್ಜರಕಾಡು ಪುರಭವನದಲ್ಲಿ "ಜಾನಪದ ಉತ್ಸವ 2022" ಸಂಪನ್ನಗೊಂಡಿತು. ಇದೇವೇಳೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಜಾನಪದ ಪ್ರಶಸ್ತಿ ಪ್ರಧಾನ ಶ್ರೀಮತಿ ವಿಜಯ ಗೋಪಾಲ ಬಂಗೇರರ "ನೆನಪಿನಂಗಳದಿಂದ" ಪುಸ್ತಕ ಬಿಡುಗಡೆ ಮತ್ತು ಉಡುಪಿ ಹಾಗೂ ಬ್ರಹ್ಮಾವರ ತಾಲೂಕು ಘಟಕಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಶಾಸಕ ಕೆ. ರಘುಪತಿ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Kshetra Samachara
18/06/2022 09:29 pm