ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಧವೆ ಕಮಲಮ್ಮ ಗೋಶಾಲೆಯ ಆವರಣ ಗೋಡೆ ನಿರ್ಮಾಣಕ್ಕೆ 15 ಲಕ್ಷ ಅನುದಾನ ಮಂಜೂರು

ಉಡುಪಿ: ಪರಿಶಿಷ್ಟ ಜಾತಿಯ ಕಮಲಮ್ಮ ಅವರ ಗೋಶಾಲೆಗೆ ಆವರಣಗೋಡೆ ನಿರ್ಮಿಸಲು ರಾಜ್ಯ ಸಮಾಜ‌ಕಲ್ಯಾಣ ಇಲಾಖೆಯಿಂದ 15 ಲಕ್ಷ ರೂ ಅನುದಾನವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಂಜೂರು ಮಾಡಿದ್ದಾರೆ.ಕಮಲಮ್ಮನವರು ಇಡೀ ರಾಜ್ಯಕ್ಕೆ ಓರ್ವ ಮಾದರಿಯಾದ ಪರಿಶಿಷ್ಟ ಜಾತಿಯ ಮಹಿಳೆ ಎಂಬ ನೆಲೆಯಲ್ಲಿ ವಿಶೇಷ ಕೋಟಾದಡಿ ಈ ಶಿಫಾರಸನ್ನು ಪರಿಗಣಿಸಿ ಈ ಅನುದಾನ ಮಂಜೂರು ಮಾಡಲಾಗಿದೆ.

ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಪದಗ್ರಹಣದ ಎಂಟನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಈ ಕೊಡುಗೆಯನ್ನು ಘೋಷಿಸಲಾಗಿದೆ.ಉಡುಪಿ ಜಿಲ್ಲೆ ಉಡುಪಿ ನಗರಸಭಾ ವ್ಯಾಪ್ತಿಯ ದೊಡ್ಡಣಗುಡ್ಡೆಯ ಅಂಬೇಡ್ಕರ್ ಕಾಲನಿಯ ನಿವಾಸಿ ಕಮಲಮ್ಮನವರು ಗೋರಕ್ಷಣೆಯ ವಿಷಯದಲ್ಲಿ ಓರ್ವ ಮಾದರಿ ಮಹಿಳೆ.ಪರಿಶಿಷ್ಟ ಜಾತಿಯ ವಿಧವೆಯಾಗಿರುವ ಇವರು ತನಗೆ ಸರ್ಕಾರದಿಂದ ಒದಗಿದ *ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60 ಕ್ಕೂ ಅಧಿಕ ದೇಶಿ ಹಸುಗಳನ್ನು ಪೋಷಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

27/05/2022 02:12 pm

Cinque Terre

2.73 K

Cinque Terre

0

ಸಂಬಂಧಿತ ಸುದ್ದಿ