ಮುಲ್ಕಿ: ಮುಲ್ಕಿ ಕೆಎಸ್ ರಾವ್ ನಗರದ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಮೃತಶಿಲೆಯ ನೂತನ ಗುರು ಮೂರ್ತಿ ಪ್ರತಿಷ್ಠಾಪನೆ, ಕಲಶಾಭಿಷೇಕ, ನೂತನ ಗುರುಮಂದಿರ ಉದ್ಘಾಟನೆ ಹಾಗೂ ಭಜನಾ ಮಂಗಲೋತ್ಸವವು ಮೇ.18ರಿಂದ 22 ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಅಮೃತಶಿಲೆಯ ನೂತನ ಶ್ರೀನಾರಾಯಣಗುರು ಮೂರ್ತಿಯ ಶೋಭಾಯಾತ್ರೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬಿಲ್ಲವ ಸಂಘದಿಂದ ಕಾರ್ನಾಡು, ಗೇರುಕಟ್ಟೆ ಶ್ರೀನಾರಾಯಣಗುರು ರಸ್ತೆಯ ಮೂಲಕ ಕೆಎಸ್ ರಾವ್ ನಗರ ಶ್ರೀ ನಾರಾಯಣಗುರು ಮಂದಿರಕ್ಕೆ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೇ.20 ಬೆಳಿಗ್ಗೆ ಗುರುಮೂರ್ತಿ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ನೂತನ ಗುರುಮಂದಿರದ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
Kshetra Samachara
18/05/2022 05:35 pm