ಉಡುಪಿ: ಮೇ 14ರಂದು ಅಪರಾಹ್ನ ನಡೆಯುವ ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ (ಟ್ಯಾಪ್ತಿ) ೩೬ನೇ ಘಟಕೋತ್ಸವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ ಎಂದು ಟ್ಯಾಪ್ತಿಯ ನಿರ್ದೇಶಕ ಪ್ರೊ.ಮಧು ವೀರರಾಘವನ್ ತಿಳಿಸಿದ್ದಾರೆ.
ಟ್ಯಾಪ್ತಿಯ ಘಟಕೋತ್ಸವವು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದ್ದು, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್, ಟ್ಯಾಪ್ತಿ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ರಂಜನ್ ಪೈ ಹಾಗೂ ಬೆಂಗಳೂರಿನ ಟೆನೋವಾದ ಸಹಸ್ಥಾಪಕ ಸೋನು ಸೋಮಪಾಲನ್ ಪಾಲ್ಗೊಳ್ಳಲಿದ್ದಾರೆ ಎಂದು ಟ್ಯಾಪ್ತಿಯ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ ಕೃಷ್ಣಮಠಕ್ಕೆ ಭೇಟಿ ನೀಡಲಿರುವ ಸಚಿವೆ ,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ಕೊಡಲಿದ್ದಾರೆ.
Kshetra Samachara
13/05/2022 12:37 pm