ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಕದಿಕೆ ಕೇಂದ್ರ ಜುಮ್ಮಾ ಮಸೀದಿಯಲ್ಲಿ ವಿಜೃಂಭಣೆಯ ಈದುಲ್ ಫಿತರ್ ಹಬ್ಬ

ಮುಲ್ಕಿ: ಹಳೆಯಂಗಡಿ ಕದಿಕೆ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಸೀದಿಯ ಖತೀಬರಾದ ಅಬ್ದುಲ್ಲಾ ಝೈನಿ ಬಡಗನ್ನೂರು ವಿಶೇಷ ದುವಾ ಪ್ರಾರ್ಥನೆ ನೀಡಿ ಐಕ್ಯತೆ, ಸಹೋದರತೆಯಲ್ಲಿ ಬಾಳುವ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿ ಎಂದು ಕರೆ ನೀಡಿದರು.

ಈ ಸಂದರ್ಭ ಕದಿಕೆ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ. ಐ. ಅಬ್ದುಲ್ ಖಾದರ್, ಪ್ರಮುಖರಾದ ಬಶೀರ್ ಕಲ್ಲಾಪು, ಎಚ್.ಕೆ. ಮೊಹಮ್ಮದ್ ಫಕ್ರುದ್ದೀನ್, ಅಬ್ದುಲ್ ರಹಿಮಾನ್ ಕುಡುಂಬೂರು, ಮುಸ್ಲಿಮ್ ಜಮಾತ್ ಒಕ್ಕೂಟ ಹಳೆಯಂಗಡಿ ಬಲದ ಅಧ್ಯಕ್ಷರಾದ ಕೆ.ಶಾಹುಲ್ ಹಮೀದ್ ಕದಿಕೆ , ಅಬ್ದುಲ್ ರಜಾಕ್, ಅಶ್ರಫ್, ಹಾಗೂ ಖತೀಬರಾದ ಅಬ್ದುಲ್ಲ ಮದನಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/05/2022 03:34 pm

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ