ಮುಲ್ಕಿ: ಪುನರೂರಿನ ಸೇವಾನಿಧಿಯ ಉದ್ಘಾಟನಾ ಸಮಾರಂಭವು ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.
ಬೆಂಗಳೂರಿನ ಖ್ಯಾತ ಚಲನಚಿತ್ರ ನಟಿ ಲಕ್ಷ್ಮೀ ಭಟ್ ಉದ್ಘಾಟಿಸಿ ಮಾತನಾಡಿ ಸೇವಾ ನಿಧಿ ಕಾರ್ಯಕ್ರಮದ ಮೂಲಕ ಗ್ರಾಮದಲ್ಲಿ ಸಾಮಾಜಿಕ ಹಾಗೂ ಸಹಾಯ ಹಸ್ತದ ಕೈಂಕರ್ಯಗಳು ನಿರಂತರವಾಗಲಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಪುರಂದರ ಶೆಟ್ಟಿ ಗಾರ್ , ಸೇವಾ ನಿಧಿಯ ಗೌರವಾಧ್ಯಕ್ಷ ಸುರೇಶ್ ರಾವ್ ನೀರಳಿಕೆ, ರವಿ ಶೆಟ್ಟಿ ಪುನರೂರು ಗುತ್ತು , ದೈವಸ್ಥಾನದ ಅರ್ಚಕ ರಘುರಾಮ್ ಪುನರೂರು, ,ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಗುರಿಕಾರ ಮುತ್ತಪ್ಪ, ಅಧ್ಯಕ್ಷ ಹರೀಶ್ ಪಿ, ಸೇವಾನಿಧಿ ಪುನರೂರು ನ ಅಧ್ಯಕ್ಷ ಪ್ರಶಾಂತ ಪುನರೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾನಿಧಿಯ ಸಹಾಯ ಧನವನ್ನು ಯಶೋಧ ಎಸ್ ರಾವ್ ಪುನರೂರು ಹಾಗೂ ಬ್ರಹ್ಮ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ನೀಡಲಾಯಿತು ಹಾಗೂ ಶ್ರೀ ಮುಗೇರ ದೈವಗಳ ಭಕ್ತಿಗೀತೆ ಲೋಕಾರ್ಪಣೆ ಗೊಳಿಸಲಾಯಿತು. ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಗೋಪಾಲ ಕೃಷ್ಣ ಆರ್ ಪುನರೂರು ಧನ್ಯವಾದ ಸಮರ್ಪಿಸಿದರು ,ರಾಕೇಶ್ ಕೊರಗಪ್ಪ ಪುನರೂರು ನಿರೂಪಿಸಿದರು
Kshetra Samachara
24/04/2022 04:12 pm