ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೂರು ದಿನಗಳ ಸಾಹಿತ್ಯ ಸಮ್ಮೇಳನ 'ತುರಾಯಿ'ಗೆ ಸಿದ್ಧತೆ

ಉಡುಪಿ: ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ 'ತುರಾಯಿ- ಆನ್ವೇಷಣೆಯ ಪ್ರತಿಬಿಂಬ' ಎಂಬ ಅಡಿಬರಹದೊಂದಿಗೆ ಏ.14, 15 ಮತ್ತು 16 ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ ಅವರು, ಹಿರಿಯ ಜನಪದ ವಿದ್ವಾಂಸ ವಿಶ್ರಾಂತ ಪ್ರೊ. ಎ.ವಿ. ನಾವಡ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು, ಕುಂದಾಪುರ ಉಡುಪಿ ಜಿಲ್ಲೆ ಇಲ್ಲಿಯ ಕವಿಮುದ್ದಣ ವೇದಿಕೆಯಲ್ಲಿ ಜರಗಲಿದೆ.ದಿನಾಂಕ 14 ರಂದು ಅಪರಾಹ್ನ 2:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅನಾವರಣದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ಶುಭಚಾಲನೆ ದೊರೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಸಮ್ಮೇಳನಾಧ್ಯಕ್ಷರಾದ ಪ್ರೊಫೆಸರ್ ಎ.ವಿ. ನಾವಡ ನೇರವೇರಿಸಲಿದ್ದಾರೆ. ತಾಳಮದ್ದಲೆ 'ಮಾತೃ ಸಾರಥ್ಯ'ವು: ಡಾ. ಜಗದೀಶ ಶೆಟ್ಟಿ ಸಿದ್ಧಾಪುರ ಇವರ ಪರಿಕಲ್ಪನೆಯಲ್ಲಿ ನಡೆಯಲಿದೆ. ವಿವಿಧ ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯ, ಹೋಳಿ ಕುಣಿತ, ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ. ಸಂಜೆ 4:45ಕ್ಕೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾವನಮನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

09/04/2022 06:34 pm

Cinque Terre

8.5 K

Cinque Terre

0

ಸಂಬಂಧಿತ ಸುದ್ದಿ