ಮುಲ್ಕಿ: ದೈವ ದೇವಸ್ಥಾನಗಳು ಅಭಿವೃದ್ಧಿ ಕಂಡರೆ ಊರು ಅಭಿವೃದ್ಧಿ ಕಂಡಂತೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ನ ಹೇಳಿದರು.
ಅವರು ಅತ್ತೂರು ಪಾಲೆದಡಿ ಶ್ರೀ ರಕ್ತೇಶ್ವರೀ ಸನ್ನಿದಾನ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ಪ್ರತಿಷ್ಟೆ ಕಲಾಶಾಷೇಕ ಹಾಗೂ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ದಾನಿಗಳ ಸಹಕಾರದ ಜೊತೆ ದೇವರ ದಯೆ ಇದ್ದರೆ ಯಾವುದೇ ಕೆಲಸಗಳು ಸುಗಮವಾಗಿ ಸಾಗಲಿದೆ ಎಂಬುದಕ್ಕೆ ಕೇವಲ ಮೂರು ತಿಂಗಳಲ್ಲಿ ಜೀರ್ಣೋದ್ಧಾರಗೊಂಡ ಈ ಸನ್ನಿದಾನವೇ ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ಮಹಾದಾನಿಗಳಾದ ಅತ್ತೂರು ಭಂಡಾರ ಮನೆ ಅಶಾಲತಾ ಶೆಟ್ಟಿ ಹಾಗೂ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅತ್ತೂರುಬೈಲು ವೆಂಕಟರಾಜ ಉಡುಪ, ಅತ್ತೂರು ಭಂಡಾರಮನೆ ಶಂಭು ಮುಕಾಲ್ಡಿ, ಶ್ರೀ ರಕ್ತೇಶ್ವರೀ ಸನ್ನಿದಿ ಪಾಲೆದಡಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಪಡುಮನೆ ಉಪಸ್ಥಿತರಿದ್ದರು.
Kshetra Samachara
03/04/2022 08:20 pm