ಪುತ್ತೂರು: ಕರ್ನಾಟಕ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪಡೆದ ಸವಣೂರು ಸೀತಾರಾಮ ರೈ ಯವರಿಗೆ ಸಾರ್ವಜನಿಕ ಸನ್ಮಾನವಾದ ಸೀತಾಭಿಮಾನ ಸಮಾರಂಭ ಪುತ್ತೂರಿನ ಬಂಟರ ಭವನದಲ್ಲಿ ಎಪ್ರಿಲ್ 2 ರಂದು ನಡೆಯಿತು. ಸಮಾರಂಭವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಸಾರ್ವಜನಿಕರ ಪರವಾಗಿ ಸವಣೂರು ಸೀತಾರಾಮ ರೈ ದಂಪತಿಗಳನ್ನು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸನ್ಮಾನಿಸಿದರು. ಸನ್ಮಾನದಲ್ಲಿ ವಿಶೇಷತೆಯನ್ನು ಪ್ರದರ್ಶಿಸಿದ ಸನ್ಮಾನ ಸಮಿತಿ ಸದಸ್ಯರು ದಂಪತಿಗಳಿಗೆ ಬೃಹತ್ ಗಾತ್ರದ ಸನ್ಮಾನ ಪತ್ರ, ದೊಡ್ಡ ಬುಟ್ಟಿಯಲ್ಲಿ ಹಣ್ಣು-ಹಂಪಲುಗಳನ್ನು ನೀಡುವ ಮೂಲಕ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಸಚಿವ ಎಸ್.ಅಂಗಾರ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸೀತಾರಾಮ ರೈ ದಂಪತಿಗಳಿಗೆ ಅಭಿನಂದಿಸಿದರು.
Kshetra Samachara
02/04/2022 04:49 pm