ಮುಲ್ಕಿ: ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಜಲಕದ ಬಲಿ ಭಕ್ತಿ ಬಾವ ಮೆರೆಯಿತು.
ಶ್ರೀದೇವರ ರಥಾರೋಹಣ ದ ಬಳಿಕ ದೇವರು ಜಲಕಕ್ಕೆ ಚಂದ್ರ ಶಾನುಭಾಗ ಕುದ್ರುವಿನಲ್ಲಿ ಜಲಕದ ಕೆರೆ ತೆರಳಿ ಸ್ನಾನ ಮಾಡಿ ವಾಪಸ್ ಬರುವಾಗ ಚಂದ್ರಮಂಡಲ ರಥದಲ್ಲಿ ಕಟ್ಟೆ ಪೂಜೆ ನಡೆದು, ತೂಟೆ ದಾರ ಬಳಿಕ ದೇವಸ್ಥಾನದಲ್ಲಿ ಪ್ರಾತಃಕಾಲ ಜಲಕದ ಬಲಿ ನೋಡುವುದೇ ಒಂದು ವಿಶೇಷ.
ಈ ಸಂದರ್ಭ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ, ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ, ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ,ಉದ್ಯಮಿ ಅರವಿಂದ ಪೂಂಜಾ ಕಾರ್ನಾಡು, ಗೋಪಾಲಕೃಷ್ಣ ಭಟ್, ವೆಂಕಟೇಶ್ ಹೆಬ್ಬಾರ್, ಸುನಿಲ್ ಆಳ್ವ, ಕಿಶೋರ್ ಶೆಟ್ಟಿ ಬಪ್ಪನಾಡು, ಮತ್ತಿತರರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಮಹಾ ಮಂತ್ರಾಕ್ಷತೆ ನಡೆಯಲಿದೆ.
Kshetra Samachara
25/03/2022 10:07 am