ಮುಲ್ಕಿ: ಇಂದಿನ ಯುವಜನತೆ ಮುಂದೆ ಹಲವಾರು ಸವಾಲುಗಳಿವೆ. ಅಂತಹ ಸವಾಲುಗಳ ನಡುವೆಯೂ ಅವಕಾಶಗಳನ್ನು ತಮ್ಮದಾಗಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ. ಹಾಗಾಗಿ ಅವಕಾಶಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಎಂದು ಎರ್ಮಾಳು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಡಾ|ಜ್ಯೋತಿ ಚೇಳ್ಯಾರು ಹೇಳಿದರು.
ಅವರು ಕಿನ್ನಿಗೋಳಿಯ ಕೆಐಸಿಟಿ ಹಾಗೂ ಎಂಸಿಟಿಸಿ ತಾಂತ್ರಿಕ ಮತ್ತು ಕಂಪ್ಯೂಟರ್ ತರಬೇತಿ ಶಿಕ್ಷಣ ಸಂಸ್ಥೆಯ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾನವ ನಾಗರಿಕತೆಯ ಉಗಮ ಕಾಲದಿಂದಲೇ ಮನುಷ್ಯ ಯಂತ್ರ ಹಾಗೂ ತಂತ್ರಜ್ಞಾನದ ಮೊರೆ ಹೋಗಿದ್ದಾನೆ. ಇಂದಿಗೂ ಸಾಕಷ್ಟು ಆವಿಷ್ಕಾರಗಳು ಮನುಷ್ಯನ ಶ್ರಮವನ್ನು ಕಡಿಮೆಗೊಳಿಸುತ್ತಾ ಬಂದಿದೆ. ಶಿಕ್ಷಣ ಎನ್ನುವುದು ಒಂದು ಸುದೀರ್ಘ ಪಯಣ. ಅಲ್ಲಿ ತಾಳ್ಮೆ, ಆತ್ಮ ವಿಶ್ವಾಸ, ಶ್ರಮ ಎಲ್ಲವೂ ಮುಖ್ಯ. ಸೊನ್ನೆಯಿಂದ ಹೊರಟು ಸಾವಿರದವರೆಗೆ ತಲುಪುವುದೇ ನಿಜವಾದ ಶಿಕ್ಷಣ. ಒಂದೊಮ್ಮೆ ಸಿಗುವ ಸಣ್ಣ ಅವಕಾಶವೂ ನಮ್ಮನು ಜಗತ್ತಿನಲ್ಲಿಯೇ ಗುರುತಿಸುವಂತೆ ಮಾಡುತ್ತದೆ ಎಂದುಅಭಿಪ್ರಾಯಪಟ್ಟರು.
ಸಂಸ್ಥೆಯ ಹಿತೈಷಿಗಳಾಗಿದ್ದ ಮರ್‌ಹೂಂ ಮುಲ್ಕಿ ಎಂ.ಎಚ್. ಅಬ್ಬಾಸ್ ಹಾಗೂ ದಿ. ವೈ. ಕಿಟ್ಟ ಕರ್ಕೇರ ರವರಿಗೆ ನುಡಿ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ.ಎ. ವಹಿಸಿದ್ದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಸಂಸ್ಥೆಯ ಪ್ರಾಂಶುಪಾಲ ನವೀನ್ ವೈ. ವಾಚಿಸಿದರು. ವೇದಿಕೆಯಲ್ಲಿ ಜಿ ಪಂ ಮಾಜಿ ಸದಸ್ಯೆ ಶೈಲಾ ಸಿಕ್ವೇರಾ,ಗುತ್ತಕಾಡು ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಟಿ.ಕೆ. ಖಾದರ್ ಉಪಸ್ಥಿತರಿದ್ದರು.
ಗಾಯತ್ರಿ ಸ್ವಾಗತಿಸಿ, ನಮಿತ ವಂದಿಸಿದರು. ಕುಮಾರಿ ಯೋಗಿತಾ ನಿರೂಪಿಸಿದರು.
Kshetra Samachara
14/03/2022 07:31 pm