ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ತೋಕೂರು: ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ ಹಾಗೂ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಮತ್ತಿತರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ತೋಕೂರು ಫೇಮಸ್ ಯೂತ್ ಕ್ಲಬ್‌ನಲ್ಲಿ ನಡೆಯಿತು.

ಬಜ್ಪೆ ವಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನಾಗರತ್ನ ಮಾತನಾಡಿ, ಮಹಿಳಾ ಸಶಕ್ತೀಕರಣಕ್ಕೆ ಮುಕ್ತವಾದ ನೆರವು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆ ತರುವ ಸಮಾಜ ಮುಖಿ ಚಿಂತನೆಗೆ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಲತ ಯೋಗೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾ.ಪಂ ಸದಸ್ಯರಾದ ಮೋಹನದಾಸ, ಪ್ರಮೀಳಾ ಡಿ ಶೆಟ್ಟಿ, ನಮಿತಾ, ಜ್ಯೋತಿ, ಕಾರ್ಯದರ್ಶಿ ಲೋಕನಾಥ ಭಂಡಾರಿ, ಕ್ಲಬ್‌ನ ಗೌರವಾಧ್ಯಕ್ಷ ಗುರುರಾಜ ಎಸ್ ಪೂಜಾರಿ, ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಪ್ರದೀಪ್ ಕಾಮತ್ ಉಪಸ್ಥಿತರಿದ್ದರು. ಬಳಿಕ ಮಹಿಳೆಯರಿಗೆ ಭಾಷಣ ಜಾಗೃತಿ ಹಾಡು ಮತ್ತು ಮನೋರಂಜನಾ ಕ್ರೀಡೆ ನಡೆಸಲಾಯಿತು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Edited By : PublicNext Desk
Kshetra Samachara

Kshetra Samachara

04/03/2022 08:09 pm

Cinque Terre

2.2 K

Cinque Terre

0

ಸಂಬಂಧಿತ ಸುದ್ದಿ