ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಮಾರ್ಚ್ 6 ರಂದು ಪದ್ಮಶ್ರೀ ಮಹಾಲಿಂಗ ನಾಯ್ಕರಿಗೆ ಸನ್ಮಾನ

ಪುತ್ತೂರು: ಪದ್ಮಶ್ರೀ ಪ್ರಶಸ್ತಿ ಆಯ್ಕೆಯಾದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ ಅವರಿಗೆ ಮರಾಠಿ ಸಂಘದ ವತಿಯಿಂದ ಸಮಾಜದ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಪುತ್ತೂರು ಮರಾಠಿ ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕ ಹೇಳಿದರು.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈ ಮಹಾಲಿಂಗ ನಾಯ್ಕ, ತನಗೆ ದೊರೆತ ಬರಡು ಭೂಮಿಯಲ್ಲಿ ಸುರಂಗ ನೀರು ಬಳಸಿ ಸಮೃದ್ಧ ಕೃಷಿ ಬೆಳೆಸುವ ಮೂಲಕ ಹಲವರಿಗೆ ಮಾರ್ಗದರ್ಶಕರಾಗಿದ್ದಾರೆ.

ಮಹಾಲಿಂಗ ನಾಯ್ಕರ ಈ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಮಾರ್ಚ್ 6 ರಂದು ಕೊಂಬೆಟ್ಟು ಮರಾಠಿ ಸಮಾಜದಲ್ಲಿ ನಡೆಯಲಿದೆ ಎಂದರು. ಸನ್ಮಾನ ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ದರ್ಬೆ ವೃತ್ತದಿಂದ ಸನ್ಮಾನಿತರನ್ನು ಮೆರವಣಿಗೆ ಮೂಲಕ ಕೊಂಬೆಟ್ಟುವಿನಲ್ಲಿರುವ ಮರಾಠಿ ಸಂಘಕ್ಕೆ ಕರೆತರಲಾಗುವುದು ಎಂದರು.

Edited By : Nagaraj Tulugeri
Kshetra Samachara

Kshetra Samachara

23/02/2022 03:41 pm

Cinque Terre

2.78 K

Cinque Terre

0

ಸಂಬಂಧಿತ ಸುದ್ದಿ