ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ʼರೈತರ ಕಣ್ಮಣಿʼ ಕೆ.ಎಸ್. ಪುಟ್ಟಣ್ಣಯ್ಯ ಸಂಸ್ಮರಣೆ, ವಿಚಾರಗೋಷ್ಠಿ

ಮಂಗಳೂರು: ರೈತರ ಕಣ್ಮಣಿ, ಹೃದಯವಂತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ನೆನಪು ಮತ್ತು ರಾಜ್ಯಮಟ್ಟದ ವಿಚಾರಗೋಷ್ಠಿ

ನಗರದ ಪುರಭವನದಲ್ಲಿಇಂದು ನಡೆಯಿತು. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್ ದಾಸ್ ಉದ್ಘಾಟಿಸಿದರು.

ರಾಜ್ಯಾಧ್ಯಕ್ಷ ಬಡಗಲಪುರ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಪ್ರಾಸ್ತಾವಿಕ ಮಾತನಾಡಿದರು. ಚಾಮರಸಮಾಲಿ ಪಾಟೀಲ್, ಸುನೀತಾ ಪುಟ್ಟಣ್ಣಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ಪ್ರತಿ ತಾಲೂಕಿನ ವಿಶೇಷತೆಗೆ ಅನುಗುಣವಾಗಿ ಬೆಳೆ ಗೊತ್ತುಪಡಿಸಿ ತಾಲೂಕಿಗೊಂದು ಕೃಷಿ ಯೋಜನೆ ರೂಪಿಸಿ, ರಾಜ್ಯ ಸರಕಾರ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯತಂತ್ರ ರೂಪಿಸಬೇಕು. ರೈತರ ಭದ್ರತೆಯೇ ದೇಶದ ಸುಭದ್ರತೆ ಎಂದರು.

Edited By :
Kshetra Samachara

Kshetra Samachara

18/02/2022 06:24 pm

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ