ಮುಲ್ಕಿ: ಬಿರುವೆರ್ ಕುಡ್ಲ( ರಿ) ಮುಲ್ಕಿ ಘಟಕದ ವತಿಯಿಂದ ಸುವರ್ಣ ಸೇವಾ ಯೋಜನೆ ಕಾರ್ಯಕ್ರಮ ಮುಲ್ಕಿ ಸಮೀಪದ ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಿರುವೆರ್ ಕುಡ್ಲ ಸ್ಥಾಪಕರಾದ ಉದಯ ಪೂಜಾರಿ ಉದ್ಘಾಟಿಸಿ ಮಾತನಾಡಿ ಯುವ ಜನಾಂಗ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಘಟನೆಗಳ ಮೂಲಕ ಅಶಕ್ತರಿಗೆ, ನೊಂದವರಿಗೆ ಸಹಾಯಹಸ್ತದ ಮೂಲಕ ಮಾದರಿಯಾಗಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿರುವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷರಾದ ಕಿಶೋರ್ ಸಾಲ್ಯಾನ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಬಿಎಸ್ಸೆಂಡಿಪಿ ಅಧ್ಯಕ್ಷರಾದ ಬಿ ನವೀನ್ ಚಂದ್ರ ಪೂಜಾರಿ, ಬಿರುವೆರ್ ಕುಡ್ಲ ಕೇಂದ್ರ ಸಮಿತಿ ಅಧ್ಯಕ್ಷರಾದ ರಾಕೇಶ್ ಪೂಜಾರಿ, ಉದ್ಯಮಿ ಮೋಹನ್ ದಾಸ್ ಹೆಜಮಾಡಿ, ಯುವವಾಹಿನಿ ವಿದ್ಯಾನಿಧಿ ಟ್ರಸ್ಟಿ ವಾಸು ಪೂಜಾರಿ, ನಿವೃತ್ತ ಪ್ರಾಂಶುಪಾಲ ವೈಎನ್ ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಕೋಶಾಧಿಕಾರಿ ಅಶೋಕ್ ಅಮೀನ್, ಉಮೇಶ್ ಮಾನಂಪಾಡಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ವಿಜಯಕುಮಾರ್ ಕುಬೆವೂರು (ಸಮಾಜಸೇವೆ), ಯಾದವ ಪೂಜಾರಿ ಮಾನಂಪಾಡಿ (ದೈವಾರಾಧನೆ) ಹರೀಶ್ ಶೆಟ್ಟಿ ಪಂಜಿನಡ್ಕ (ಕೃಷಿಕ) ರವರನ್ನು ಗೌರವಿಸಲಾಯಿತು ಹಾಗೂ ಸೇವಾ ನಿಧಿ ಹಾಗು ವಿದ್ಯಾನಿಧಿ ಮೂಲಕ ಸಹಾಯ ಹಸ್ತ ನೀಡಲಾಯಿತು.
ಮೋಹನ್ ಸುವರ್ಣ ನಿರೂಪಿಸಿದರು.
Kshetra Samachara
06/02/2022 12:33 pm