ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದಿರೆ: ಕರಗ ನೃತ್ಯದ ಸಾರಥಿಗೆ ಒಲಿದ ಜಾನಪದ ಅಕಾಡೆಮಿ ಪುರಸ್ಕಾರ

ಮೂಡಬಿದಿರೆ: ಬಿದಿರೆ ಆರ್ಟ್ಸ್‌ನ ಕರಗ ನೃತ್ಯದ ಸಾರಥಿ ಎಂದೇ ಖ್ಯಾತಿ ಪಡೆದುಕೊಂಡಿರುವ ಮೂಡಬಿದಿರೆಯ ವೆಂಕಟೇಶ ಬಂಗೇರ ತಮ್ಮ ಕಲೆಗೆ ಮನ್ನಣೆ ಪಡೆದುಕೊಂಡು ಸರಕಾರದ 2021ರ ಜಾನಪದ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ತನ್ನ 8ನೇ ವಯಸ್ಸಿನಲ್ಲಿಯೇ ಸರ್ಕಸ್‌ಗಳಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡೋದನ್ನ ಕಲಿತ್ತಿದ್ದ ಇವರು ಮುಂದೆ ನಾಟಕ, ಯಕ್ಷಗಾನ ಕ್ಷೇತ್ರದಲ್ಲೂ ಕೂಡ ಸೈ ಎನಿಸಿ ಕಳೆದ 52 ವರ್ಷಗಳಿಂದಲೂ ಕಲಾ ಸೇವೆ ಮಾಡುತ್ತಿದ್ದಾರೆ.

ಕೀಲು ಕುದುರೆ ತಂಡದಲ್ಲಿ 100ಕ್ಕೂ ಅಧಿಕ ಮಂದಿಗೆ ಕರಗ ನೃತ್ಯವನ್ನು ಕಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿದಿರೆ ಆರ್ಟ್ಸ್ ಎಂಬ ತಂಡವನ್ನು ರಚಿಸಿ, ಸುಮಾರು 25 ಕಲಾವಿದರಿಗೆ ಆಶ್ರಯದಾತರಾಗಿದ್ದಾರೆ. ಈ ತಂಡವು ಕೀಲು ಕುದುರೆ, ಕರಗನೃತ್ಯ, ಹಾಸ್ಯ ಹಾಗೂ ಬೇತಾಳ ಗೊಂಬೆ ಕುಣಿತದ ಜತೆಗೆ ಹಲವಾರು ಬಗೆಯ ಗೊಂಬೆ ಕುಣಿತವನ್ನು ಪರಿಚಯಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ. ತಮ್ಮ 62ರ ವಯಸ್ಸಿನಲ್ಲೂ ನೃತ್ಯವನ್ನು ಯಾವುದೇ ಶಾಸ್ತ್ರೀಯ ಸಂಗೀತದ ಕುಣಿತಕ್ಕೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಪ್ರದರ್ಶಿಸುತ್ತಾರೆ.

ವೆಂಕಟೇಶ್ ಅವರು ಅಲ್ಯೂಮಿನಿಯಂ ಕೊಡವನ್ನು ಕಲಾತ್ಮಕವಾಗಿ ಅಲಂಕರಿಸಿ, ಅದರ ಮೇಲೆ ಸ್ಟೀಲ್ ಪಾತ್ರೆ ಜೋಡಿಸಿ, ಆರೂವರೆ ಫೀಟ್ ಉದ್ದದ 20 ಕೆ.ಜಿ ತೂಕದ ಕರಗವನ್ನು ಕೈಯಿಂದಲೇ ತಯಾರಿಸಿ ಮೆರವಣಿಗೆಯಲ್ಲಿ ತಲೆಯ ಮೇಲೆ ಇಟ್ಟು ನೃತ್ಯ ಪ್ರದರ್ಶಿಸುತ್ತಾರೆ. ಹೀಗೆ ಇವರ ಈ‌ ಕಲಾ ಸೇವೆಗೆ ಸರಕಾರ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.

Edited By : Nagesh Gaonkar
PublicNext

PublicNext

04/02/2022 10:15 pm

Cinque Terre

49.66 K

Cinque Terre

0

ಸಂಬಂಧಿತ ಸುದ್ದಿ