ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡೆತ್ತೂರು: ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ

ಮುಲ್ಕಿ: ಸಂಘಸಂಸ್ಥೆಗಳು ಜವಬ್ದಾರಿಯುತವಾಗಿ ಜನರಪರವಾಗಿ ಗ್ರಾಮದ ಅಭ್ಯುದಯಕ್ಕೆ ಸಹಕಾರ ನೀಡಿದರೆ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸೀತರಾಮ ಶೆಟ್ಟಿ ಹೇಳಿದರು.

ಅವರು ಕೊಡೆತ್ತೂರಿನ ಶ್ರೀ ಕೋರ‍್ದಬ್ಬು ದ್ಯೆವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಪ್ರಯುಕ್ತ ಕೊಡೆತ್ತೂರು ಆದರ್ಶ ಬಳಗ(ರಿ) ಆಶ್ರಯದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಆದರ್ಶ ಬಳಗ ಗ್ರಾಮದ ಅಭಿವೃದ್ದಿಯ ದೃಷ್ಟಿಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ, ಶಿಕ್ಷಣಕ್ಕೆ ಪೂರಕವಾಗಿ ಸಾಧನೆ ಮಾಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ದಂತಹ , ಸಾಧಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು

ಸಾಧಕರ ನೆಲೆಯಲ್ಲಿ ಕೆ. ಸೀತಾರಾಮ ಶೆಟ್ಟಿ , ಯಕ್ಷಗಾನ ಬಾಗವತ ಪಟ್ಲ ಸತೀಶ್ ಶೆಟ್ಟಿ , ದಿನೇಶ್ ಶೆಟ್ಟಿ ಕಾಳವಕಟ್ಟೆ ಸಮ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರದಡಿಯಲ್ಲಿ ರಾಷ್ಟ್ರಮಟ್ಟದ ಆಟಗಾರ‍್ತಿ ದಿಶಾ ಕುಕ್ಯಾನ್, ಎಸ್‌ಎಸ್‌ಎಲ್‌ಸಿಯಲ್ಲಿ ಸಾಧಕರಾದ ದಿಕ್ಷಿತ್ ಕೋಟ್ಯಾನ್, ಅದಿತಿ, ಪ್ರಭಾತ್, ಸುರಕ್ಷಾ ಅವರನ್ನು ಗೌರವಿಸಲಾಯಿತು.

ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ವಿ. ಶೆಟ್ಟಿ , ಕೊಡೆತ್ತೂರು ದೇವಸ್ಯ ಮಠದ ಧರ್ಮದರ್ಶಿ ವೇದವ್ಯಾಸ ಉಡುಪ, ಕೊಡೆತ್ತೂರು ಜಯರಾಮ ಮುಕ್ಕಾಲ್ದಿ , ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ , ಗಣೇಶ್ ಶೆಟ್ಟಿ ಸಂಕಯ್ಯಬೆನ್ನಿ , ಆದರ್ಶಬಳಗದ ಅಧ್ಯಕ್ಷ ನಾರಾಜ ಶೆಟ್ಟಿ ಕೊಡೆತ್ತೂರು, ದಾಮೋದರ ಶೆಟ್ಟಿ ಕೊಡೆತ್ತೂರು, ಕೇಶವ ಕರ್ಕೇರಾ ಉಪಸ್ಥಿತರಿದ್ದರು

ಬಳಿಕ ಪಾವಂಜೆ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

23/01/2022 07:47 pm

Cinque Terre

11.15 K

Cinque Terre

0

ಸಂಬಂಧಿತ ಸುದ್ದಿ