ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಐಕಳ ಕಂಬಳ ಮುಂದೂಡಿಕೆ

ಮುಲ್ಕಿ:ಕರಾವಳಿ ಕರ್ನಾಟಕದ ತುಳುನಾಡಿನ ಪುರಾತನ ಜಾನಪದ ಕ್ರೀಡೆಯೂ, ಧಾರ್ಮಿಕ ಆಚರಣೆ ಹಾಗೂ ಸಂಪ್ರದಾಯಬದ್ಧವೂ, ಆರಾಧನಾತ್ಮಕವಾಗಿ ನಡೆಯುವ ಐಕಳಬಾವ ಕಾಂತಾಬಾರೆ -ಬೂದಾಬಾರೆ ಜೋಡು ಕರೆ ಕಂಬಳ ಹಾಗೂ ಈ ವರ್ಷದ ಐಕಳೋತ್ಸವ --2022 ಕಾರ್ಯಕ್ರಮವು ತಾ.29.01.2022ನೇ ಶನಿವಾರ ನಿಗದಿಯಾಗಿದ್ದು,ಕರ್ನಾಟಕ ಸರಕಾರದ ಕೋವಿಡ್ ನಿಯಮಗಳ ಆದೇಶದ ಪ್ರಯುಕ್ತ ಮುಂದೂಡಲಾಗಿದೆ.

ಮುಂದಿನ ಫೆಬ್ರವರಿ ತಿಂಗಳಲ್ಲಿ ಸೂಕ್ತ ದಿನಾಂಕದಂದು ಧಾರ್ಮಿಕ ವಿಧಾನಗಳೊಂದಿಗೆ ಈ ವರ್ಷದ ಕಾರ್ಯಕ್ರಮವನ್ನು ಎಲ್ಲಾ ಕಂಬಳ ಅಭಿಮಾನಿಗಳ, ಜಿಲ್ಲಾಡಳಿತದ ಹಾಗೂ ಜಿಲ್ಲಾ ಕಂಬಳ ಸಮಿತಿಯ, ಸಹಕಾರದೊಂದಿಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಐಕಳಬಾವ ಕಾಂತಾಬಾರೆ -ಬೂದಾಬಾರೆ ಕಂಬಳ ಸಮಿತಿ,ಐಕಳಮತ್ತು ಮುಂಬಾಯಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

Edited By : PublicNext Desk
Kshetra Samachara

Kshetra Samachara

21/01/2022 04:04 pm

Cinque Terre

3.16 K

Cinque Terre

0

ಸಂಬಂಧಿತ ಸುದ್ದಿ