ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೋರಿಕೆಯಂತೆ ದೇವಳದ ಪುರಾತನ ಬ್ರಹ್ಮರಥದ ಆಯ, ವಾಸ್ತು, ಸುತ್ತಳತೆ, ಎತ್ತರ, ಸಂಪ್ರದಾಯ ಹಾಗೂ ವಾಸ್ತುಶಿಲ್ಪಕ್ಕೆ ಚ್ಯುತಿಯಾಗದಂತೆ ನಿರ್ಮಿಸಿ ದೇವಳಕ್ಕೆ ಸಮರ್ಪಿಸಲು ಉದ್ಯಮಿ ಸುನೀಲ್ ಆರ್. ಶೆಟ್ಟಿ ಸಮ್ಮತಿಸಿದ್ದಾರೆ. ನೂತನ ಬಹ್ಮರಥ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ.
Kshetra Samachara
19/01/2022 11:19 am