ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ವತಿಯಿಂದ ಎಸ್.ಕೋಡಿ ಬಳಿಯ ಪದ್ಮಾವತಿ ಲಾನ್‌ನಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕ ಉಮನಾಥ ಕೋಟ್ಯಾನ್ ಮಾತನಾಡಿ ಮಕ್ಕಳಿಗೆ ಯಕ್ಷಗಾನ ಕಲೆಯ ಬಗ್ಗೆ ಅಭಿರುಚಿ ಮೂಡಿಸುವ ಮುಖಾಂತರ ಯಕ್ಷಗಾನ ಪರಂಪರೆ ಉಳಿಸುವ ಕಲಾ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಪುನರೂರು ವಿಪ್ರಸಂಪದ ಸ್ಥಾಪಕಾಧ್ಯಕ್ಷ ಸುರೇಶ್ ರಾವ್, ಕಿನ್ನಿಗೋಳಿ ಪ. ಪಂ. ಮುಖ್ಯಾಧಿಕಾರಿ ಸಾಯಿಷ್ ಚೌಟ, ಉದ್ಯಮಿ ಪಟೇಲ್ ವಾಸುದೇವ್ ರಾವ್, ಸಂತೋಷ್ ಶೆಟ್ಟಿ,ಗುರುರಾಜ್ ಎಸ್.ಪೂಜಾರಿ, ನಿವೃತ್ತ ಮೆಸ್ಕಾಂ ಇಂಜಿನಿಯರ್ ಜಯ ಶೆಟ್ಟಿ,ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್,ಕುಮಾರ್ ಪೂಜಾರಿ,ಹೇಮಂತ್, ಉಪನ್ಯಾಸಕ ಡಾ. ವಿಜಯ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಕ್ಷ ಕಲೋತ್ಸವ ಪ್ರಶಸ್ತಿಯನ್ನು ಮಂಗಳೂರಿನ ಸಮಾಜ ಸೇವಾ ಸಂಸ್ಥೆಯಾಗಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಗೆ ಹಾಗೂ ಉಳ್ಳಾಲದ ಮೆಸ್ಕಾಂ ಇಲಾಖೆಯ ಕಿರಿಯ ಇಂಜಿನಿಯರ್ ಸಮಾಜ ಸೇವಕ ನಿತೇಶ್ ಹೊಸಗದ್ದೆ ರವರಿಗೆ ನೀಡಿ ಸನ್ಮಾನಿಸಲಾಯಿತು.
ಹಿಮ್ಮೇಳ ಯಕ್ಷಗಾನ ಭಾಗವತ ಕಾವ್ಯಶ್ರೀ ಅಜೇರು, ಚೆಂಡೆ ಕಲಾವಿದ ಮಧೂರು ರಾಮ ಪ್ರಕಾಶ ಕಲ್ಲೂರಾಯ ರವರನ್ನು ಗೌರವಿಸಲಾಯಿತು.
ಫೌಂಡೇಶನ್‌ನ ಅಧ್ಯಕ್ಷ ಜಯಂತ್ ಅಮೀನ್ ಕೆರೆಕಾಡು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂಧ್ಯಾ ಯು. ಆಚಾರ್ಯ, ಧನ್ಯವಾದ ಅರ್ಪಿಸಿದರು ಶರತ್ ಶೆಟ್ಟಿ ಸಂಕಲಕರಿಯ ನಿರೂಪಿಸಿದರು. ಬಳಿಕ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.
Kshetra Samachara
14/01/2022 07:29 pm