ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು:ಕೋವಿಡ್ ನಿಯಮಗಳನ್ನು ಪಾಲಿಸುವುದರೊಂದಿಗೆ ಉತ್ತಮ ಆರೋಗ್ಯದ ಸಮಾಜ ನಿರ್ಮಿಸೋಣ

ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಪರ್ವದಿನದಂದು ಶ್ರೀ ಅದಿಜನಾರ್ದನ ಸೇವಾ ಯುವಕ ಮಂಡಲ(ರಿ) ವತಿಯಿಂದ ವಿವಿಧ ಭಜನಾ ಮಂಡಳಿಗಳೊಂದಿಗೆ ವಾರ್ಷಿಕ ಭಜನಾ ಮಂಗಲೋತ್ಸವ ನಡೆಯಿತು.

ಕಾರ್ಯಕ್ರಮವನ್ನು ಸುಮಿತ್ರ ಲೋಕಯ್ಯ ದೇವಾಡಿಗ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಚಂದ್ರಹಾಸ್. ಎನ್. ಶೆಟ್ಟಿ ಮಾತನಾಡಿ ಯುವ ಜನಾಂಗ ಭಜನಾ ಕಾರ್ಯಕ್ರಮಗಳ ಮೂಲಕ ದೇವರ ಕೈಂಕರ್ಯ ಶ್ಲಾಘನೀಯವಾಗಿದ್ದು ಕೋವಿಡ್ ನಿಯಮಗಳನ್ನು ಪಾಲಿಸುವುದರೊಂದಿಗೆ ಉತ್ತಮ ಆರೋಗ್ಯ ಸಮಾಜ ನಿರ್ಮಿಸೋಣ ಎಂದರು.

ಆಡಳಿತ ಸಮಿತಿ ಸದಸ್ಯರು, ಯುವಕ ಮಂಡಲ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯರು ಹಾಜರಿದ್ದರು.

ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು ಶುಕ್ರವಾರ ರಾತ್ರಿ ಭಜನಾ ಮಂಗಲೋತ್ಸವ ಹಾಗೂ ದೇವಸ್ಥಾನದಲ್ಲಿ ರಂಗಪೂಜೆ ನಡೆಯಲಿದೆ.

Edited By :
Kshetra Samachara

Kshetra Samachara

14/01/2022 02:35 pm

Cinque Terre

2.85 K

Cinque Terre

0

ಸಂಬಂಧಿತ ಸುದ್ದಿ