ಬಜಪೆ : ಶ್ರೀ ಕ್ಷೇತ್ರ ಪೆರಾರದ ಬಂಟಕಂಬ ರಾಜಾಂಗಣ ಜೀರ್ಣೋದ್ಧಾರದ ಪೂರ್ವ ಭಾವಿಯಾಗಿ ವಿಜ್ಞಾಪಣಾ ಪತ್ರ ಬಿಡುಗಡೆ ಹಾಗೂ ನಿಧಿ ಸಂಚಯ ಕಾರ್ಯಕ್ರಮವು ಪೂರ್ವ ನಿಗದಿಯಂತೆ, ಕೋವಿಡ್ ನಿಯಮಗಳ ಅನುಸಾರ ಬೆಳಿಗ್ಗೆ ಪೆರಾರ ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಬಂಟ ಕಂಬ ರಾಜಾoಗಣ ಜೀರ್ಣೋದ್ದಾರದ ಪುಣ್ಯ ಕಾರ್ಯದಲ್ಲಿ ಗ್ರಾಮಸ್ಥರ ಸಹಕಾರ ಅತೀ ಅಗತ್ಯ ಈ ಮೂಲಕ ಮಾದರಿಯಾಗಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯ ನಡೆಸಬೇಕಾಗಿದೆ.ಜೀರ್ಣೋದ್ದಾರಕ್ಕಾಗಿ ಒಂದು ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು ಪ್ರಾರಂಭಿಕವಾಗಿ 20 ಲಕ್ಷ ಬಿಡುಗಡೆಗೆ ಒಪ್ಪಿಕೊಂಡಿದ್ದಾರೆ ಉಳಿದ ಅನುದಾನವನ್ನು ಹಂತ ಹಂತವಾಗಿ ನೀಡುವ ಬಗ್ಗೆ ಮುಖ್ಯಮಂತ್ರಿ ಗಳು ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭ ಕ್ಷೇತ್ರದ ಪೆರ್ಗಡೆಯವರಾದ ಮುಂಡಬೆಟ್ಟುಗುತ್ತು ಗಂಗಾಧರ ರೈ,ಬ್ರಾಣಬೆಟ್ಟು ಗುತ್ತು ಪ್ರತೋಷ್ ಮಲ್ಲಿ,ಪಡುಪೆರಾರ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಮಿತಾ ಮೋಹನ್ ಶೆಟ್ಟಿ,ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಕೃಷ್ಣ ಅಮೀನ್ ,ದೇವಳದ ಆಡಳಿತಾಧಿಕಾರಿ ಸಾಯೀಶ್ ಚೌಟ,ಪದಾಧಿಕಾರಿಗಳು ಹಾಗೂ ಪೆರಾರ ಮಾಗಣೆಯ 16 ಗುತ್ತುಮನೆತನ ಹಾಗೂ ಒಳಗುತ್ತುಗಳ ಪ್ರಮುಖರು ಉಪಸ್ಥಿತರಿದ್ದರು.ಸಾಯಿಶ್ ಚೌಟ ಸ್ವಾಗತಿಸಿ, ಸುರೇಶ್ ಅಂಚನ್ ನಿರೂಪಿಸಿದರು.
Kshetra Samachara
09/01/2022 07:06 pm