ಬಜಪೆ: ಗುರುಪುರ ಗೋಳಿದಡಿಗುತ್ತಿನ ವಾರ್ಷಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ 'ಗುತ್ತುದ ವರ್ಸೊದ ಪರ್ಬೊ' ಜ.18 ಮತ್ತು 19ರಂದು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್ ನಿತ್ಯಾನಂದ ಅವರ ಆಶೀರ್ವಚನ ಹಾಗೂ ಗಡಿಕಾರ ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯಲಿದೆ.
ಜ. 18ರಂದು ಪ್ರಾತಃಕಾಲದಲ್ಲಿ ಶ್ರೀ ವೈದ್ಯನಾಥಾದ್ಯ ಪಂಚ ದೇವತೆಗಳಿಗೆ ಪೂಜೆ, ಬೆಳಿಗ್ಗೆ 8:30ರಿಂದ ಗಣಪತಿ ಹೋಮ, ಬೆಳಿಗ್ಗೆ 10:30ರಿಂದ ಪಾಶುಪತ ಹೋಮ, ಬೆಳಿಗ್ಗೆ 11:30ಕ್ಕೆ ಪೂರ್ಣಾಹುತಿ ಜರುಗಲಿದೆ. 11:30ರಿಂದ 1:30ರವರೆಗೆ ಗೋಳಿದಡಿಗುತ್ತಿನ ಚಾವಡಿಯ ಮಿತ್ರರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ಸಂಜೆ 6ಕ್ಕೆ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ 'ಗುತ್ತಿನ ವರ್ಷದ ಒಡ್ಡೋಲಗ'. ಕೆ.ಎಸ್ ನಿತ್ಯಾನಂದರ ಗುರು ಸಾನ್ನಿಧ್ಯದಲ್ಲಿ ನಡೆಯಲಿರುವ ಒಡ್ಡೋಲಗದಲ್ಲಿ ಮೂಡಬಿದ್ರೆ ಚೌಟರ ಅರಮನೆಯ ಕುಲದೀಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಗದೀಶ ಶೆಟ್ಟಿ ಯಾನೆ ಇಂದ್ರಾಳ ಕೊಗರ ಶೆಟ್ಟಿ(ಗಡಿಕಾರರು, ದೊಡ್ಡಗುತ್ತು, ಇರುವೈಲು), ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್(ಗಡಿಕಾರರು, ಕೇಂಜ ಬಗ್ಗ ತೋಟ) ದೀಪ ಪ್ರಜ್ವಲನ ಮಾಡಿದರೆ, ದೀಪಾ ಎನ್ ಶೆಟ್ಟಿ(ಪೆರ್ಮಾರಗುತ್ತು, ಮೂಲ್ಕಿ) ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎರ್ಮಾಳು ರವಿ ಭಟ್(ಉದ್ಯಮಿ), ನವೀನ್‍ಚಂದ್ರ ಆಳ್ವ(ತಿರುವೈಲುಗುತ್ತು), ಭಾಗ್ಯರಾಜ ಆಳ್ವ(ಕಾರಮೊಗರುಗುತ್ತು) ಮತ್ತು ರಾಜೇಂದ್ರ ಸಿಂಗ್ ಬಾಬು(ಚಲನಚಿತ್ರ ನಿರ್ದೇಶಕ) ಪಾಲ್ಗೊಳ್ಳುವರು. ಸಂಜೆ 7:30ರಿಂದ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ `ಪುಣ್ಯಭೂಮಿ ಭಾರತ' ನುಡಿನಾದ ನಾಟ್ಯಾಮೃತ ಜರುಗಲಿದೆ.
ಜ. 19ರಂದು ಬೆಳಿಗ್ಗೆ ಶ್ರೀ ರುದ್ರಹೋಮ, 10:30ರಿಂದ ಶ್ರೀ ಚಂಡಿಕಾಹೋಮ, 11:30ಕ್ಕೆ ಪೂರ್ಣಾಹುತಿ, ಬಳಿಕ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 6:30ರಿಂದ 11:30ರವರೆಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ನಾಗವೃಜ ಕ್ಷೇತ್ರ ಪಾವಂಜೆ ಹಳೆಯಂಗಡಿ ಇವರಿಂದ `ರಾಜಾ ಕಾಕತೀಯ' ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಸಂಜೆ 4:30ಕ್ಕೆ ಗುತ್ತಿನ ಚಾವಡಿಯಲ್ಲಿ ಶ್ರೀ ದೇವರ ಪೂಜೆಯ ಬಳಿಕ ಸಂಜೆ 6:15ಕ್ಕೆ ಚೌಕಿಪೂಜೆ ನಡೆಯಲಿದೆ. ಎರಡೂ ದಿನವೂ ನಿರಂತರ ಊಟೋಪಚಾರ ಇರುವುದು.
Kshetra Samachara
07/01/2022 08:46 pm