ಮುಲ್ಕಿ: ಬಿಲ್ಲವ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ 2022ರ ಡಿಸೆಂಬರ್ ತಿಂಗಳಲ್ಲಿ ಬೃಹತ್ ಬಿಲ್ಲವ ಸಮಾವೇಶವನ್ನು ನಡೆಸಲಾಗುವುದು ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಹೇಳಿದರು.
ಮುಲ್ಕಿಯ ಬಿಲ್ಲವರ ಮಹಾಮಂಡಲದ ಸಭಾಂಗಣದಲ್ಲಿ ಜರಗಿದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ 2020 21 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಯುವ ಸಮುದಾಯದಲ್ಲಿ ಸಂಘಟನಾತ್ಮಕ ಕೊರತೆ ಎದ್ದು ಕಾಣುತ್ತಿದ್ದು ಬಿಲ್ಲವ ಯುವ ಸಮುದಾಯವನ್ನು ಸಂಸ್ಕಾರವಂತರಾಗಿ ರೂಪಿಸುವ ಹೊಣೆ ಹಿರಿಯರದ್ದಾಗಿದೆ, ಈ ಬಗ್ಗೆ ವಿವಿಧ ಕಡೆಗಳಲ್ಲಿ ಪೂರ್ವ ಭಾವಿ ಸಭೆಗಳನ್ನು ನಡೆಸಿ ಅಭಿಪ್ರಾಯ ಕ್ರೋಡೀಕರಿಸಿ ಸಮಾವೇಶದಲ್ಲಿ ಮಂಡಿಸಲಾಗುವುದು ಎಂದರು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ದೈವ ದರ್ಶನ ಪಾತ್ರ್ರಿ ಕೃಷ್ಣ ಪೂಜಾರಿ ಹಳೆಯಂಗಡಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಗೋಪಾಲ್ ಸಿ. ಬಂಗೇರ ಹಾಗೂ ಪೂವಪ್ಪ ಪೂಜಾರಿಯವರನ್ನು ಗೌರವಿಸಲಾಯಿತು
ಮುಂದಿನ 2ವರ್ಷದ ಅವಧಿಗೆ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ಪ್ರಕ್ರಿಯೆಯನ್ನು ಮಹಾಮಂಡಲದ ನೀತಿ ನಿರೂಪಕರಾದ ಚಂದ್ರಶೇಖರ ಸುವರ್ಣರವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಹಿಂದುಳಿದ ವರ್ಗಗಳ ನಾಯಕ ಮಾಜಿ ಕೇಂದ್ರ ಸಚಿವ ಆರ್. ಎಲ್. ಜಾಲಪ್ಪರವರಿಗೆ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಉದ್ಯಮಿ ಸೂರ್ಯಕಾಂತ್ ಜಯ ಸುವರ್ಣ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ ಎನ್ ಶಂಕರ ಪೂಜಾರಿ, ಶ್ರೀ ನಾರಾಯಣ ಗುರು ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರಿಶ್ಚಂದ್ರ ಅಮೀನ್ ,ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್,ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ಉಪಾಧ್ಯಕ್ಷ ಚಂದ್ರಶೇಖರ ಸುವರ್ಣ ಮತ್ತು ಪೀತಾಂಬರ ಹೇರಾಜೆ,ಜೊತೆ ಕಾರ್ಯದರ್ಶಿ ಗಣೇಶ್ ಎಲ್. ಪೂಜಾರಿ ಬೈಂದೂರು,ಜೊತೆ ಕೋಶಾಧಿಕಾರಿ ಶಿವಾಜಿ ಸುವರ್ಣ ಬೆಳ್ಳೆ, ಸಲಹೆದಾರರಾದ ಪಾವೂರು ಭಂಡಾರಮನೆ ಮೋಹನ್ ದಾಸ್ ಮತ್ತಿತರರು ಉಪಸ್ತಿತರಿದ್ದರು.
ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು ಸ್ವಾಗತಿಸಿದರು,ಜೊತೆ ಕಾರ್ಯದರ್ಶಿ ಗಂಗಾಧರ ಪೂಜಾರಿ ಬಾಳ ವಂದಿಸಿದರು.
Kshetra Samachara
21/12/2021 03:20 pm