ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಶತಮಾನ ಇತಿಹಾಸದ ಚೇರ್ಕಾಡಿ ಹರಕೆ ಕಂಬಳ ಸಂಪನ್ನ

ಚೇರ್ಕಾಡಿ: ಕರಾವಳಿಯಲ್ಲಿ ಸಾಂಪ್ರದಾಯಿಕ ಕಂಬಳ‌ಗಳು ಅಲ್ಲಲ್ಲಿ ನಡೆಯುತ್ತಿವೆ. ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದಲ್ಲಿ ಸಾಂಪ್ರದಾಯಿಕ ಹರಕೆ ಕಂಬಳ ಅದ್ಧೂರಿಯಾಗಿ ನಡೆಯಿತು. ಕುಶಲ ಹೆಗ್ಡೆ ಹಾಗೂ ರತ್ನಾಕರ ಹೆಗ್ಡೆ ಮತ್ತು ಗ್ರಾಮದ ದೊಡ್ಡಮನೆ ಕುಟುಂಬ ನಡೆಸಿದ ಈ ಹರಕೆ ಕಂಬಳದಲ್ಲಿ 20 ಜೋಡಿ ಕೋಣಗಳು ನೀಡಿದ ಶಕ್ತಿ ಪ್ರದರ್ಶನ ಕಂಬಳಪ್ರಿಯರನ್ನ ರಂಜಿಸಿತು.

ಇನ್ನು ಈ ಗ್ರಾಮದಲ್ಲಿ ನಡೆದ ಕಂಬಳವು ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಈ ಕಂಬಳಗದ್ದೆಗೆ ಶತಮಾನದ ಇತಿಹಾಸವಿದೆ. ಹಾಗೆಯೇ ಇಲ್ಲಿ ನೂರು ಕೊಯ್ಲು ಆಗಿದೆ.ಹೀಗಾಗಿ ಈ ಗದ್ದೆಯಲ್ಲಿ ಕೋಣ ಓಡಿಸಿದವರಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ.

ಕೋವಿಡ್ ಆತಂಕ ಕೊಂಚಮಟ್ಟಿಗೆ ಮರೆಯಾಗಿದ್ದು, ಜನರು ಕಂಬಳವನ್ನು ಸಖತ್ ಎಂಜಾಯ್ ಮಾಡಿದರು.

Edited By : Shivu K
Kshetra Samachara

Kshetra Samachara

13/12/2021 05:29 pm

Cinque Terre

10.45 K

Cinque Terre

0

ಸಂಬಂಧಿತ ಸುದ್ದಿ