ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮದಲ್ಲಿ ಇಂದು ಮುಕ್ತಾಯಗೊಂಡ 19ನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳದಲ್ಲಿ ಒಟ್ಟು ದಾಖಲೆಯ 221 ಜೊತೆ ಕೋಣಗಳು ಪಾಲ್ಗೊಂಡಿದ್ದು, ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಕಂಬಳ ವೀಕ್ಷಿಸಿದರು.
ಪ್ರಥಮ ಸ್ಥಾನ ಪಡೆದ ಕೋಣಗಳ ಯಜಮಾನರಿಗೆ 2 ಪವನ್ ಚಿನ್ನ, ದ್ವಿತೀಯ ಸ್ಥಾನಿಯಾದವರಿಗೆ 1 ಪವನ್ ಚಿನ್ನ ಮತ್ತು ಕೋಣ ಓಡಿಸಿದವರಿಗೆ ಕಾಲು ಪವನ್ ಚಿನ್ನ ದೊಂದಿಗೆ ಗೌರವಿಸಲಾಯಿತು.
* ಫಲಿತಾಂಶ: ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿದವರು -
ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ.
ಕೋಣಗಳನ್ನು ಓಡಿಸಿದವರು: ಬೈಂದೂರು ಭಾಸ್ಕರ ದೇವಾಡಿಗ.
ಹಗ್ಗ ಹಿರಿಯ: (32 ಜತೆ)
ಪದವು ಕಾನಡ್ಕ ಪ್ಲೇವಿ ಡಿಸೋಜ ಎ. ( ಪ್ರಥಮ),
ಕೋಣಗಳನ್ನು ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ.
ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶಕ್ತಿಪ್ರಸಾದ್ ಶೆಟ್ಟಿ ಎ.(ದ್ವಿತೀಯ),
ಕೋಣಗಳನ್ನು ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ.
ಹಗ್ಗ ಕಿರಿಯ: (32 ಜತೆ)
ಚೊಕ್ಕಾಡಿ ಕಟಪಾಡಿ ದೈವಿಕ್ ಸಂತೋಷ್ ಶೆಟ್ಟಿ ಎ. (ಪ್ರಥಮ),
ಕೋಣಗಳನ್ನು ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.
ಸಿದ್ಧಕಟ್ಟೆ ಪೊಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ(ದ್ವಿತೀಯ),
ಕೋಣಗಳನ್ನು ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ.
ಅಡ್ಡ ಹಲಗೆ: (6 ಜತೆ)
ಕೋಟ ಗಿಳಿಯಾರು ಹಂಡಿಕೆರೆ ವಸಂತ ಕುಮಾರ್ ಶೆಟ್ಟಿ(ಪ್ರಥಮ),
ಕೋಣಗಳನ್ನು ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ.
ಬೋಳಾರ ತ್ರಿಶಾಲ್ ಕೆ. ಪೂಜಾರಿ ಎ.(ದ್ವಿತೀಯ),
ಕೋಣಗಳನ್ನು ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ.
ನೇಗಿಲು ಹಿರಿಯ: (41 ಜತೆ)
ಬೋಳದಗುತ್ತು ಜಗದೀಶ್ ಶೆಟ್ಟಿ ಬಿ. (ಪ್ರಥಮ),
ಕೋಣಗಳನ್ನು ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.
ಮಾರ್ಪಳ್ಳಿ ಕಂಬಳ ಮನೆ ರಾಜೇಶ್ ಶೆಟ್ಟಿ ಎ.(ದ್ವಿತೀಯ),
ಕೋಣಗಳನ್ನು ಓಡಿಸಿದವರು: ಭಟ್ಕಳ ಶಂಕರ್ .
ನೇಗಿಲು ಕಿರಿಯ: (115 ಜತೆ)
ಭಟ್ಕಳ ಹೆಚ್.ಎನ್. ನಿವಾಸ ಪಿನ್ನುಪಾಲ್ (ಪ್ರಥಮ),
ಕೋಣಗಳನ್ನು ಓಡಿಸಿದವರು: ಭಟ್ಕಳ ಶಂಕರ್.
ತೋಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ(ದ್ವಿತೀಯ),
ಕೋಣಗಳನ್ನು ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ.
Kshetra Samachara
12/12/2021 09:50 pm