ನೀಲಾವರ: ವಿಶ್ವಜನೀನ ಟ್ರಸ್ಟ್, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಇದರ ಅಂಗಸಂಸ್ಥೆ, ರೋಟರಿ ಕ್ಲಬ್ ಮಣಿಪಾಲ, ರೋಟರಿ ಉಡುಪಿ ವತಿಯಿಂದ ಜಂಟಿಯಾಗಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ದಿವ್ಯಾಶೀರ್ವಾದದೊಂದಿಗೆ ಸುಮೇಧ- ಪ್ರಜ್ಞಾ ವಿಕಾಸ ಕೇಂದ್ರ ಡಾ. ಐ.ಆರ್. ಆಚಾರ್ಯ ಸ್ಮಾರಕ ವಿಶೇಷ ಮಕ್ಕಳ ಶಾಲೆ ಮತ್ತು ಪುನರ್ವಸತಿ ಕೇಂದ್ರ ನೀಲಾವರದಲ್ಲಿ "ವಿಶ್ವ ವಿಕಲಚೇತನರ ದಿನಾಚರಣೆ" ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದಾನಿಗಳಿಂದ ಕೊಡಮಾಡಿದ ಉಪಕರಣಗಳನ್ನು ಸಂಸ್ಥೆಗೆ ಹಸ್ತಾಂತರಿಸಿ ಬಳಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ಉಡುಪಿ ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಪಿ.ವಿ ಭಂಡಾರಿ, ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷ ವಿರೂಪಾಕ್ಷ ದೇವರಮನೆ, ಉಡುಪಿ ರೋಟರಿ ಅಧ್ಯಕ್ಷ ಹೇಮಂತ್ ಯು. ಕಾಂತ್, ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್ ಹಾಗೂ ಸುಮೇಧ- ಪ್ರಜ್ಞಾ ವಿಕಾಸ ಕೇಂದ್ರದ ಆಡಳಿತ ಮಂಡಳಿ ಸದಸ್ಯರು, ರೋಟರಿ ಕ್ಲಬ್ ಮಣಿಪಾಲ, ರೋಟರಿ ಉಡುಪಿಯ ಸದಸ್ಯರು ಉಪಸ್ಥಿತರಿದ್ದರು.
Kshetra Samachara
04/12/2021 08:03 pm