ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ಕೊಡುಗೆ ಶ್ಲಾಘನೀಯ: ಪದ್ಮನಾಭ ಭಟ್

ಕಟೀಲು : ಕಟೀಲಿಗೆ ದುರ್ಗಾಸಂಜೀವನಿ ಮಣಿಪಾಲ ಆಸ್ಪತ್ರೆ ಮತ್ತು ಸಂಸ್ಕೃತ ವಿದ್ಯಾಲಯ ನೀಡಿದ್ದು ಮಾತ್ರವಲ್ಲದೆ ಬ್ರಾಹ್ಮಣ ಸಮಾಜದ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ| ಸುರೇಶ್ ರಾವ್ ರವರಿಗೆ ಕಟೀಲು ನಂದಿನಿ ಬ್ರಾಹ್ಮಣ ಸಭಾದಿಂದ ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷರಾದ ಡಾ.ಪದ್ಮನಾಭ ಭಟ್ ಎಕ್ಕಾರು ಮಾತನಾಡಿ ಸಾಧಕರಿಗೆ ಗೌರವ ಶ್ಲಾಘನೀಯ, ಬಡವರ ಕಣ್ಣೀರೊರೆಸುವ ಮೂಲಕ ಸಂಘ ಸಂಸ್ಥೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸುರೇಶ್ರಾವ್ ಸಾಧನೆ ಅಭಿನಂದನೀಯ ಎಂದರು

ಈ ಸಂದರ್ಭದಲ್ಲಿ ವೇದವ್ಯಾಸ ಉಡುಪ ಕೊಡೆತ್ತೂರು, ಜಗದೀಶ ರಾವ್ ಎಕ್ಕಾರು, ವೆಂಕಟೇಶ ಉಡುಪ, ಅಜಾರು ನಾಗರಾಜ ರಾಯ, ಪ್ರಭಾಕರ ರಾವ್, ಜಗದೀಶ್ ರಾವ್ ಕಟೀಲು, ಜಗದೀಶ್ ಭಟ್ ಕಟೀಲು ಮೊದಲಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/11/2021 03:31 pm

Cinque Terre

3.19 K

Cinque Terre

0

ಸಂಬಂಧಿತ ಸುದ್ದಿ