ಮುಲ್ಕಿ:ಸಮಾಜದಲ್ಲಿ ನಾವು ಪ್ರಾಮಾಣಿಕರಾಗಿದ್ದು ಇತರರಿಗೆ ಬೆಳೆಯಲು ಪ್ರೋತ್ಸಾಹ ನೀಡಬೇಕು.ಜೀವನದಲ್ಲಿ ಕಷ್ಟಗಳನ್ನು ನಿಭಾಯಿಸಿದಲ್ಲಿ ಉನ್ನತ ಸ್ಥಾನ ಮಾನ ಪಡೆಯಲು ಸಾಧ್ಯ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಅವರು ಮುಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುರತ್ಕಲ್ ಪರಿಸರದಲ್ಲಿ ಅತೀ ಕಡಿಮೆ ದರದಲ್ಲಿ ಊಟೋಪಚಾರ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಮೇಶ್ ಟಿ.ಎಸ್.ರವರನ್ನು ಪತ್ನಿ ರೂಪಾ ಜೊತೆಗೆ ಗೌರವಿಸಲಾಯಿತು.
ಈ ಸಂದರ್ಭ ಉದ್ಯಮಿ ಜಾನ್ ಕ್ವಾಡ್ರಸ್, ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ಸತೀಶ್ ಭಂಡಾರಿ, ಎಚ್‌ಡಿಎಫ್‌ಸಿ ಪ್ರಬಂಧಕ ಬಿ.ರಮಾನಾಥ ಪ್ರಸಾದ್ ಪ್ರಭು, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಅಶೋಕ್ ಕುಮಾರ್ ಶೆಟ್ಟಿ, ಜಯಪಾಲ್ ಶೆಟ್ಟಿ ಐಕಳಬಾವ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್ ,ಹೊಸ ಅಂಗಣದ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ವಾಮನ ಕೋಟ್ಯಾನ್ ನಡಿಕುದ್ರು ಉಪಸ್ಥಿತರಿದ್ದರು
Kshetra Samachara
26/11/2021 05:18 pm