ಮುಲ್ಕಿ: ಮುಲ್ಕಿ ಸಮೀಪದ ಕಿನ್ನಿಗೋಳಿ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನಕ್ಕೆ ಶ್ರೀಕ್ಷೇತ್ರ ಸುಬ್ರಹ್ಮಣ್ಯದ ನೆಟ್ಟಣದಿಂದ ತಂದ ನೂತನ ಧ್ವಜಸ್ತಂಭದ ಮರದ ಮೆರವಣಿಗೆ ಭಾನುವಾರ ಮದ್ಯಾಹ್ನ 3 ಗಂಟೆಗೆ ಕಿನ್ನಿಗೋಳಿ ರಾಜಾಂಗ ಣದಿಂದ ಹೊರಟು ಕಟೀಲು ಸೌಂದರ್ಯ ಪ್ಯಾಲೇಸ್ ನಿಂದ ಕಾಲ್ನಡಿಗೆ ಯಲ್ಲಿ ಮೆರವಣಿಗೆ ಮೂಲಕ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಶ್ರೀ ಕ್ಷೇತ್ರದಲ್ಲಿ ಮುಂದಿನ ವರ್ಷಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ನೂತನ ಧ್ವಜಸ್ತಂಬ ನಿರ್ಮಾಣವಾಗಲಿದೆ.
Kshetra Samachara
21/11/2021 10:12 am