ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಶ್ರೀದುರ್ಗಾಪರಮೇಶ್ವರೀ ದೇವಳ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿಭ್ರಮರ ಇಂಚರ ನುಡಿಹಬ್ಬ ಕ್ಕೆ ಚಾಲನೆ

ಬಜಪೆ:ಉತ್ತಮ ಪುಸ್ತಕ ಪತ್ರಿಕೆ ಓದುವುದರಿಂದ ಜ್ಙಾನ ಹೆಚ್ಚಿಸಿಕೊಂಡು ಚಿಂತನ ಶೀಲ ರಾಗಬಹುದು ಎಂದು ಸಾಹಿತಿ ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್ ಹೇಳಿದರು.ಅವರು ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಭ್ರಮರ ಇಂಚರ ನುಡಿಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.ಬೆಳಿಗ್ಗೆ ಕಟೀಲು ಪದವಿ ಕಾಲೇಜಿನಿಂದ ಭುವನೇಶ್ವರೀಯ ಭವ್ಯ ಮೆರವಣೆಗೆಯು ನಡೆಯಿತು.ಶಾಲಾ ವಠಾರದಲ್ಲಿ ಪುಸ್ತಕ ಪ್ರದರ್ಶನ,ಕರಕುಶಲ ವಸ್ತು ಪ್ರದರ್ಶನ,ಗೊಂಬೆಗಳು,ಪುಸ್ತಕದ ಅಂಗಡಿ ನುಡಿ ಹಬ್ಬಕ್ಕೆ ಮೆರುಗು ನೀಡಿದವು.

ಈ ಸಂದರ್ಭ ಪದವಿ ಕಾಲೇಜಿನಲ್ಲಿ ಎಕ್ಕಾರು ವಿಜಯ ಯುವ ಸಂಗಮದವರು ನಿರ್ಮಿಸಿರುವ ಆಶೋಕವನ ವನ್ನು ಉದ್ಯಮಿ ಯಾದವ ಕೋಟ್ಯಾನ್ ಉದ್ಘಾಟಿಸಿದರು.ಕಟೀಲು ಪದವೀ ಕಾಲೇಜಿನಿಂದ ನುಡಿಹಬ್ಬದ ಮೆರವಣೆಗೆಯನ್ನು ಉದ್ಯಮಿ ಗಿರೀಶ್ ಶೆಟ್ಟಿ ಪೆರ್ಮುದೆ ಉದ್ಘಾಟಿಸಿದರು.ಉದ್ಯಮಿ ದೊಡ್ಡಯ್ಯ ಮೂಲ್ಯ ಧ್ವಜಾರೋಹಣ ಗೈದರು.ಕಟೀಲು ದೇವಳದ ವಾಸುದೇವ ಆಸ್ರಣ್ಣ ಶುಭಹಾರೈಸಿದರು.

ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು,ಕರಾಟೆ ಶಿಕ್ಷಕ ಈಶ್ವರ್ ಕಟೀಲ್,ಉದ್ಯಮಿಗಳಾದ ಪುರುಷಷೋತ್ತಮ ಶೆಟ್ಟಿ,ಧನಂಜಯ ಶೆಟ್ಟಿಗಾರ್,ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್,ನಿವೃತ್ತ ಉಪ ಪ್ರಾಚಾರ್ಯ ಉಮೇಶ್ ರಾವ್ ಎಕ್ಕಾರ್,ನಿವೃತ್ತ ಶಿಕ್ಷಕ ಸುಂದರ ಪೂಜಾರಿ,ಸಾಹಿತಿ ಡಾ.ಪದ್ಮನಾಭ ಭಟ್,ಕೊಡೆತ್ತೂರು ಗುತ್ತು ಬಿಪಿನ್ ಪ್ರಸಾದ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಪದವೀ ಪೂರ್ವ ಕಾಲೇಜಿನ ಪ್ರಾಚಾರ್ಯೆ ಕುಸುಮ ವಂದಿಸಿ,ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

13/11/2021 07:22 pm

Cinque Terre

5.66 K

Cinque Terre

0

ಸಂಬಂಧಿತ ಸುದ್ದಿ