ಉಡುಪಿ: ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮತ್ತು ಪಥಸಂಚಲನದ ಕಾರ್ಯಕ್ರಮದ ಬಳಿಕ ಅಭೂತಪೂರ್ವ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದು ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ.ಹೌದು, ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮ ಪ್ರಯುಕ್ತ ನಡೆದ ನೃತ್ಯಗಳು ರಸಿಕರನ್ನು ಸೂಜಿಗಲ್ಲಿನಂತೆ ಸೆಳೆದವು.
ಸ್ವತಃ ಸಚಿವ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್ ಮತ್ತು ನೆರೆದ ಜನಸ್ತೋಮ ಚಿಣ್ಣರ ನಾಡು ನುಡಿಯ ಗರಿಮೆ ಸಾರುವ ಹಾಡಿಗೆ ಹಾಕಿದ ಹೆಜ್ಜೆಗೆ ಮನಸೋತರು.ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು,ನಿತ್ಯೋತ್ಸವ ತಾಯೆ ನಿತ್ಯೋತ್ಸವ ,ಹಚ್ಚೇವು ಕನ್ನಡದ ದೀಪ ಹಾಡು ನೆರೆದ ಜನರನ್ನು ಮಂತ್ರಮುಗ್ಧರನ್ನಾಗಿಸಿದವು.
Kshetra Samachara
01/11/2021 01:25 pm