ಮುಲ್ಕಿ: ದುಷ್ಟ ಚಿಂತನೆಗಳನ್ನು ಲಯಗೊಳಿಸಿ ಉತ್ತಮ ವಿಚಾರಗಳ ಬೆಳಕನ್ನು ಮೂಡಿಸುವ ಹಬ್ಬವೇ ನವರಾತ್ರಿ ಉತ್ಸವವಾಗಿದ್ದು ಸತ್ ಚಿಂತನೆಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ಗುಣಗಳನ್ನು ರೂಡಿಸಿಕೊಳ್ಳಲು ಸಾಧ್ಯವಿದೆ ಎಂದು ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ವಾಸುದೇವ ಕುಡ್ವಾ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವದ ಕಾರ್ಯಕ್ರಮಗಳನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶ್ರೀ ಕ್ಷೇತ್ರದ ಅರ್ಚಕ ಶ್ರೀಕೃಷ್ಣ ಶಾಂತಿ ವಿಶೇಷ ಪ್ರಾರ್ಥನೆಗೈದು ಪ್ರಸಾದ ನೀಡಿದರು.
ಈ ಸಂದರ್ಭ ಶಿವ ಪ್ರಣಾಮ್ ವಿದುಶಿ ಅನ್ನಪೂರ್ಣ ರಿತೇಶ್ ಶಿಷ್ಯರಾದ ಹಿತಾ ಉಮೇಶ್ ಮತ್ತು ಮೋಕ್ಷಾ ಶೆಟ್ಟಿಯವರಿಂದ ಭರತನಾಟ್ಯ ಸೇವೆ ನಡೆಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ರಮೇಶ ಅಮೀನ್, ಕಟ್ಟಡ ಸಮಿತಿ ಅಧ್ಯಕ್ಷ ವಿಠಲ ಅಮೀನ್, ಕಾರ್ಯದರ್ಶಿ ಕಮಲಾಕ್ಷ ಬಡಗುಹಿತ್ಲು, ಕೋಶಾಧಿಕಾರಿ ಪ್ರಕಾಶ ಎಂ.ಸುವರ್ಣ, ಉಮೇಶ್ ಮಾನಂಪಾಡಿ, ರಮಾನಾಥ್ ಸುವರ್ಣ, ಯಾದವ ಪಡುಬೈಲ್ , ರಾಜೇಶ್ ಅಮೀನ್,ಮಹಿಳಾ ಮಂಡಳಿ ಅಧ್ಯಕ್ಷೆ ಅಂಬಾವತಿ, ಮಾಜಿ ಅಧ್ಯಕ್ಷರುಗಳು, ಆಡಳಿತ ಸಮಿತಿ ಸದಸ್ಯರು, ಭಜನಾ ಮಂಡಳಿ, ಭಕ್ತ ವೃಂದ ಹಾಜರಿದ್ದರು.
Kshetra Samachara
07/10/2021 10:03 pm