ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಂಬಳ ಅಕಾಡೆಮಿಯ ತರಬೇತಿ ಶಿಬಿರದ ಪ್ರಾತ್ಯಕ್ಷಿಕೆ! ಕಂಬಳ ಕೆರೆಯಲ್ಲಿ ಕೋಣಗಳ ಓಟ

ಮಂಗಳೂರು: ಕಂಬಳ ಅಕಾಡೆಮಿಯ ತರಬೇತಿ ಶಿಬಿರದ ಪ್ರಾತ್ಯಕ್ಷಿಕೆ ಮೂಡಬಿದಿರೆಯ ಕಡಲಕೆರೆ ಬಳಿಯ ಕೋಟಿ - ಚೆನ್ನಯ ಜೋಡುಕರೆ ಕಂಬಳ ಕರೆಯಲ್ಲಿ ನಡೆಯಿತು.

ಈ ಬಾರಿ ತರಬೇತಿ ಶಿಬಿರಕ್ಕೆ ಸೇರ್ಪಡೆಗೊಳ್ಳಲು 219 ಯುವಕರು ಆಗಮಿಸಿದ್ದರು. ಆದರೆ ವಿವಿಧ ಹಂತದ ಆಯ್ಕೆ ಪ್ರಕ್ರಿಯೆ ನಡೆದು ಕೊನೆಯದಾಗಿ 33 ಮಂದಿಯನ್ನು ಶಿಬಿರಾರ್ಥಿಯಾಗಿ ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. 15 ದಿನಗಳ ಕಾಲ ಈ ಶಿಬಿರಾರ್ಥಿಗಳಿಗೆ ಕೋಣಗಳು ಓಡಿಸುವ ತರಬೇತಿ ಮಾತ್ರವಲ್ಲದೆ, ಕೋಣಗಳನ್ನು ಸಾಕುವುದು, ಬೆತ್ತದ ತಯಾರಿಗಳ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯು ಉಚಿತವಾಗಿದ್ದು, ಕಂಬಳ ಅಕಾಡೆಮಿ ತರಬೇತಿಗೆಂದು 7 ಲಕ್ಷ ರೂ. ಖರ್ಚು ಮಾಡಲಿದೆ.

ಈ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಬೆಳಗ್ಗೆ 6ರಿಂದ ರಾತ್ರಿ ‌9ರವರೆಗೆ ಯೋಗಾಸನ, ವ್ಯಾಯಾಮ, ಕೋಣಗಳೊಂದಿಗೆ ತರಬೇತಿ, ಉಪನ್ಯಾಸ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ಮುಂದಿನ‌ ದಿನಗಳಲ್ಲಿ ಮಹಿಳೆಯರಿಗೂ ಕಂಬಳ ತರಬೇತಿಯನ್ನು ನೀಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

01/10/2021 08:32 pm

Cinque Terre

22.55 K

Cinque Terre

7

ಸಂಬಂಧಿತ ಸುದ್ದಿ