ವರದಿ :ದಾಮೋದರ ಮೊಗವೀರ ನಾಯಕವಾಡಿ .
ಬೈಂದೂರು : ಬೈಂದೂರು ತಾಲ್ಲೂಕಿನಾದ್ಯಂತ ಶ್ರೀ ಮಾಹಾಸತಿ ದೇವಿಯ ಚಿಕ್ಕ ಮೇಳ ತಂಡ ನಾಯ್ಕನಕಟ್ಟೆ ಮಳೆಗಾಲದಲ್ಲಿ ಬೈಂದೂರು ಹಾಗೂ ಕುಂದಾಪುರ ಪರಿಸರದಲ್ಲಿ ಸೇವಾರ್ಥಿಗಳ ಮನೆಯಲ್ಲಿ ಪ್ರದರ್ಶನ ನೀಡುತ್ತಾರೆ .ಹೌದು ಯಾವುದೇ ಒತ್ತಡ ಇಲ್ಲದೆ ಕಲಾಭಿಮಾನಿಗಳು ಇಷ್ಟ ಪಟ್ಟಲ್ಲಿ ಮಾತ್ರ ಮನೆಯಲ್ಲಿ ಸೇವೆ ಮಾಡುತ್ತಾರೆ .
ಮಳೆಗಾಲದಲ್ಲಿ ಮನೆ ಮನೆಯಲ್ಲಿಯೂ ಕಲೆಯ ಆರಾಧನೆಯ ಗೆಜ್ಜೆ .ಚೆಂಡೆ .ಮದ್ದಳೆಯ .ಗೆಜ್ಜೆನಾದ ಮಾಡುವುದರಿಂದ ಮನೆಯಲ್ಲಿ ಯಾವುದೇ ಭೂತ ಪ್ರೇತಗಳ ಕಾಟ ದೂರವಾಗುತ್ತದೆ ಎಂದು ಪುರಾಣದಲ್ಲಿ ಹಾಗೂ ಜನರಲ್ಲಿ ನಂಬಿಕೆಯಿದೆ .
ಸಾಂಪ್ರದಾಯಿಕವಾದ ಚೌಕಟ್ಟಿನಲ್ಲಿ ಮತ್ತು ಶಿಸ್ತುಬದ್ಧವಾಗಿ ಇವತ್ತು ಚಿಕ್ಕ ಮೇಳ ನಡೆಸುವುದೆಂದರೆ ಕಷ್ಟ ಆದ್ರೂ ಈ ತಂಡ ಯಶಸ್ವಿಯಾಗಿ ಹತ್ತು ವರ್ಷಗಳಿಂದ ಕಲಾಸೇವೆ ಮಾಡುತ್ತಾ ಬರುತ್ತಿದೆ .ಈ ಮೇಳಕ್ಕೆ ಉತ್ತಮ ಬೇಡಿಕೆ ಸ್ಪಂದನೆ ಇದೆ ಇವರು ಮಾಡುವ ಪ್ರದರ್ಶನ ನೋಡಿ ತಂಡದ ಕಲಾವಿದರನ್ನು ಭಕ್ತಾದಿಗಳು ತುಂಬಾ ಪ್ರೋತ್ಸಾಹಿಸುತ್ತಿದ್ದಾರೆ .
ಈ ಚಿಕ್ಕ ಮೇಳ ಮನೆಯವರಲ್ಲಿ ಇಂತಿಷ್ಟು ಹಣ ಕಾಣಿಕೆ ಅಂತ ಕೇಳುವುದಿಲ್ಲ ಕಡ್ಡಾಯವಾಗಿ ಹಣ ಕೊಡಿ ಎನ್ನುವುದಿಲ್ಲ ಯಕ್ಷಗಾನ ಆಡಿಸುವ ಮನೆಯವರು ಸಂತೋಷದಿಂದ ಎಷ್ಟು ಕೊಡುತ್ತಾರೋ ಅಷ್ಟು ಮಾತ್ರ ಸ್ವೀಕರಿಸಿ ಖುಷಿಯಿಂದ ಇನ್ನೊಂದು ಕಡೆಗೆ ತೆರಳುತ್ತಾರೆ .
ಶಿಸ್ತುಬದ್ಧ ಚಿಕ್ಕ ಮೇಳ ಎಂದೇ ಖ್ಯಾತಿ ಪಡೆದ ಈ ಮೇಳದ ಹಿಮ್ಮೇಳದಲ್ಲಿ ಗುಡ್ರಿ ಗಣೇಶ್ ಭಟ್ .ಹೇರಂಜಾಲು ತಿಮ್ಮಪ್ಪ ದೇವಾಡಿಗ .ಅಜಿತ್ ಕುಮಾರ್ ಹಟ್ಟಿಕುದ್ರು ಮುಮ್ಮೇಳದಲ್ಲಿ ರವಿ ಶೆಟ್ಟಿ ವಡ್ಡರ್ .ಪ್ರದೀಪ್ ಶೆಟ್ಟಿ ನಾರ್ಕಳಿ .ಇವರೊಂದಿಗೆ ತುಂಬಾ ಮೇಳಕ್ಕೆ ಸಹಕರಿಸುತ್ತಿರುವವರು ಪರಮೇಶ್ವರ ದೇವಾಡಿಗ ಎಂದು ಚಿಕ್ಕ ಮೇಳ ದ ಸಂಸ್ಥಾಪಕರು ತಿಮ್ಮಪ್ಪ ದೇವಾಡಿಗ ಸಂತಸ ಮಾಧ್ಯಮದೊಂದಿಗೆ ಹಂಚಿಕೊಂಡರು .
Kshetra Samachara
27/09/2021 09:07 pm