ವರದಿ :ದಾಮೋದರ ಮೊಗವೀರ ನಾಯಕವಾಡಿ .
ಬೈಂದೂರು : ಶ್ರೀ ಉಚ್ಚಿಲ ಮಹಾಲಕ್ಷ್ಮಿ ಮತ್ತು ಬೆಣ್ಣೆಕುದ್ರು ಕುಲಮಾಸ್ತಿ, ಹಾಗೂ ಬಗ್ವಾಡಿ ಮಹಿಸಮರ್ದಿನಿ ಈ ಮೂರು ಹೋಬಳಿಗಳ ಆದಿ ಶಕ್ತಿ ಮೂರು ದೇವತೆಗಳಲ್ಲಿ ಒಂದಾದ ಶ್ರೀ ಉಚ್ಚಿಲ ಮಹಾಲಕ್ಷ್ಮಿ ತಾಯಿ ಸುವರ್ಣ ಕಳಸ ಅರ್ಪಿಸಲು "ನಿಧಿ ಸಂಗ್ರಹಕ್ಕಾಗಿ " ಕುಂದಾಪುರ ವಲಯದ ವತಿಯಿಂದ ಇಂದು ಹೆಮ್ಮಾಡಿ ಪ್ರಾಥಮಿಕ ಸಹಕಾರಿ ಮೀನುಗಾರರ ಸಂಘದ ಮತ್ಸ್ಯ ಜ್ಯೋತಿ ಸಭಾಗೃಹದಲ್ಲಿ ನೆರವೇರಿತು .
ಬೈಂದೂರು ಹೆಮ್ಮಾಡಿ ಕುಂದಾಪುರ ಹಾಲಾಡಿ ಕೋಟೇಶ್ವರ ಕೋಟ ಸಾಲಿಗ್ರಾಮ ಮಂದರ್ತಿ ಸ್ವರ್ಣ ಕಲಸ ಸಮಿತಿ ಕುಂದಾಪುರ ಇದರ ವೇದಿಕೆಯಲ್ಲಿ ಕುಂದಾಪುರ ಸಮಿತಿಯ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು .
ಈ ಸಂದರ್ಭ ಜಯ ಸಿ ಕೋಟ್ಯಾನ್ ಗುಂಡು ಅಮಿನ್ ವಾಸುದೇವ ಸಾಲಿಯಾನ್ ಸದಾನಂದ ಬಂಗೇರ ಎಂಎಂ ಸುವರ್ಣ ಕೆಕೆ ಕಾಂಚನ್ ಹಿರಿಯಣ್ಣ ಜಾತ್ರೆ ಬಿಟ್ಟು ವಿನಯ್ ಕರ್ಕೇರಾ ಶಿವರಾಮ ಕೆಎಂ ಕೋಟ ಜಗದೀಶ್ ಮಾರ್ಕೊಂಡು ಮನೋಜ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು .
ಕಾರ್ಯಕ್ರಮ ನಿರೂಪಣೆ ಶಿವರಾಂ ಕೆಎಂ ಕೋಟ ಮಾತನಾಡಿ ಸುವರ್ಣ ಕಳಸ ಆಕರ್ಷಣೆಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು .
Kshetra Samachara
18/09/2021 09:33 pm