ಹೆಬ್ರಿ: ಹೆಬ್ರಿಯ ಹಳೆ ಪ್ರವಾಸಿ ಮಂದಿರದ ಬಳಿ ನೂತನ ಪ್ರವಾಸಿ ಬಂಗಲೆಯ ಶಿಲಾನ್ಯಾಸವನ್ನು ಇಂಧನ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನೆರವೇರಿಸಿದರು.ಇಲ್ಲಿ ಎರಡು ಕೋಟಿ ವೆಚ್ಚದಲ್ಲಿ ನೂತನ ಪ್ರವಾಸಿ ಬಂಗಲೆ ನಿರ್ಮಾಣವಾಗಲಿದೆ.
ಈ ಸಂದರ್ಭ ಬಿಜೆಪಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ ,ಕಾರ್ಕಳ ತಾಲೂಕು ತಹಸೀಲ್ದಾರ್ ಪ್ರಕಾಶ್ ಆರ್ ಮರಬಳ್ಳಿ ,ಕಂದಾಯ ಅಧಿಕಾರಿ ಹಿತೇಶ್ ,ಜಿಲ್ಲಾ ಪಂ. ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್ ,ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್, ಹೆಬ್ರಿ ತಾಲೂಕು ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ,ಗ್ರಾಮ ಪಂ. ಮಾಜಿ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಎಚ್ .ಕೆ ಸುಧಾಕರ್,ಬಿಜೆಪಿ ಹಿರಿಯ ಮುಖಂಡರಾದ ಗುರುದಾಸ್ ಶೆಣೈ, ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
11/09/2021 04:13 pm