ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಕಾರ್ಕಳ: ಜೇಸಿಐ ಕಾರ್ಕಳ ರೂರಲ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಯ ಅಮೃತ ಮಹೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ನಡೆಸಿದ ಆನ್ಲೈನ್ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿಐ ಕಾರ್ಕಳ ರೂರಲ್ ನ ಅಧ್ಯಕ್ಷ ರಾದ ಆನಂದ್ ಮಾಳ ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಹೆಬ್ರಿ ಜೇಸಿಐ ನ ಅಧ್ಯಕ್ಷ ರಾದ ಮಂಜುನಾಥ ಕುಲಾಲ್ ಹಾಗೂ ಮೂಡುಬಿದಿರೆ ಜೇಸಿಐನ ಅಧ್ಯಕ್ಷರಾದ ಮಾರ್ಕ್ ಮೆಂಡೋನ್ಸಾ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಜೇಸಿಐ ಕಾರ್ಕಳ ರೂರಲ್ ನ ಮಾರ್ಗದರ್ಶಕರಾದ ಪ್ರಕಾಶ್ , ರಮಿತಾ ಶೈಲೇಂದ್ರ ರಾವ್, ಪೂರ್ವಾಧ್ಯಕ್ಷರುಗಳಾದ ಪ್ರಕಾಶ್ ಪೂಜಾರಿ ಕೆರ್ವಾಶೆ, ಸಂತೋಷ್ ಪೂಜಾರಿ , ಹಾಗೂ ಕಾರ್ಯದರ್ಶಿ ಸುರೇಶ್ ಪೂಜಾರಿ ಯವರು ವೇದಿಕೆ ಯಲ್ಲಿ ಉಪಸ್ಥಿತರಿದ್ದು ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಸ್ಫೂರ್ತಿಯುತ ನುಡಿಗಳನ್ನಾಡಿದರು.

ಜೇಸಿ ಆನಂದ್ ಮಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇಸಿ ಸುರೇಶ್ ಪೂಜಾರಿ ಧನ್ಯವಾದವಿತ್ತರು. ಜೇಸಿ ಬಂಧುಗಳು, ಬಹುಮಾನ ವಿಜೇತ ಮಕ್ಕಳು ಹಾಗೂ ಪೋಷಕರು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/09/2021 11:45 am

Cinque Terre

2.71 K

Cinque Terre

0

ಸಂಬಂಧಿತ ಸುದ್ದಿ