ಮುಲ್ಕಿ: ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
ಪ್ರಾತಃಕಾಲ ಏಳು ಗಂಟೆಗೆ ನಾರಾಯಣಗುರುಗಳ ಜನ್ಮದಿನೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮವನ್ನು ಉದ್ಯಮಿ ಮೋಹನದಾಸ ಹೆಜಮಾಡಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ಅರ್ಚಕ ಕೃಷ್ಣ ಶಾಂತಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಉದ್ಯಮಿ ಮೋಹನದಾಸ ಹೆಜಮಾಡಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸಿ ಸಮಾಜಕ್ಕೆ ಮಾದರಿಯಾಗೋಣ. ದೇವರ ಆರಾಧನೆ ಮೂಲಕ ಲೋಕಕ್ಕೆ ಬಂದಿರುವ ಸಮಸ್ತ ಕಂಟಕಗಳು ನಿವಾರಣೆಯಾಗಲಿ ಎಂದರು.
ಈ ಸಂದರ್ಭ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಆಮೀನ್, ಉಪಾಧ್ಯಕ್ಷ ಸತೀಶ್ ಅಂಚನ್, ಕಾರ್ಯದರ್ಶಿ ಕಮಲಾಕ್ಷ ಬಡಗುಹಿತ್ಲು, ಕೋಶಾಧಿಕಾರಿ ಪ್ರಕಾಶ್ ಸುವರ್ಣ, ಕಟ್ಟಡ ಸಮಿತಿ ಅಧ್ಯಕ್ಷ ವಿಠ್ಠಲ ಅಮಿನ್, ಮಹಿಳಾ ಮಂಡಳಿ ಅಧ್ಯಕ್ಷೆ ಅಂಬಾ ವತಿ, ಸೇವಾ ದಳಪತಿ ಸತೀಶ್ ಶಿಲ್ಪಾಡಿ, ಡಾ. ಹರಿಶ್ಚಂದ್ರ ಸಾಲಿಯಾನ್,ವಾಮನ್ ನಡಿಕುದ್ರು ಮತ್ತಿತರು ಉಪಸ್ಥಿತರಿದ್ದರು.
ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.
Kshetra Samachara
23/08/2021 10:10 am