ಮುಲ್ಕಿ: ಮುಲ್ಕಿ ಒಂಬತ್ತು ಮಾಗಣೆಯ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮ ಮಹಿಳಾ ಬಳಗದ ವತಿಯಿಂದ ಸರಳ ರೀತಿಯಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪುರೋಹಿತರಾದ ಧನಂಜಯ. ನೇತೃತ್ವದಲ್ಲಿ ಕಲಶ ಪ್ರತಿಷ್ಠೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಿತು. ಬಳಿಕ ಸರಳ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ
ಮಹಿಳಾ ಬಳಗದ ಅಧ್ಯಕ್ಷರಾದ ಪ್ರೇಮ ಸುಧಾಕರ ಆಚಾರ್ಯ,
ಹಾಗೂ ಸದಸ್ಯರುಗಳಾದ ಶ್ವೇತಾ, ಲಲಿತ, ಜಮುನ , ಗೀತಾ, ಸುಜಾತ. ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/08/2021 07:29 pm