ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಕೈಮಗ್ಗ ದೊಡ್ದ ರೀತಿಯಲ್ಲಿ ಪುನರುಜ್ಜೀವಗೊಳ್ಳಬೇಕು: ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ

ಮುಲ್ಕಿ:ಕಿನ್ನಿಗೋಳಿಯ ನೇಕಾರ ಸೌಧ ಸಭಾಗೃಹದಲ್ಲಿ ಕದಿಕೆ ಟ್ರಸ್ಟ್ ಕಾರ್ಕಳ ಮತ್ತು ತಾಳಿಪಾಡಿ ನೇಕಾರರ ಸಹಕಾರಿ ಸಂಘದ ವತಿಯಿಂದ ನಬಾರ್ಡ್ ಸಹಕಾರದೊಂದಿಗೆ ನಡೆದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ದಿನಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಉದ್ಘಾಟಿಸಿದರು

ಈ ಸಂದರ್ಭ ಅವರು ಮಾತನಾಡಿ ಕೈಮಗ್ಗದ ಸೀರೆ ಕದಿಕೆ ಟ್ರಸ್ಟ್ ಮೂಲಕ ಉಡುಪಿ ಸೀರೆ ಹೆಸರಲ್ಲಿ ಮಾರುಕಟ್ಟೆಗೆ ಬಂದಿರುವುದು ಅಭಿನಂದನೀಯ ಎಂದರು

ಕೈಮಗ್ಗ ದೊಡ್ದ ರೀತಿಯಲ್ಲಿ ಪುನರುಜ್ಜೀವಗೊಳ್ಳಬೇಕು ಹೆಚ್ಚಿನ ಜನರಿಗೆ ನಮ್ಮ ಕಲೆಯ ಬಗ್ಗೆ ಗೊತ್ತಿರೊಲ್ಲ, ಅದೇ ರೀತಿ ಕುತೂಹಲಕೋಸ್ಕರ ಇಲ್ಲಿ ಬಂದೆ ಆದರೆ ಇಲ್ಲಿ ಬಂದ ನಂತರ ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿದೆ ಎಂದರು.

ಕದಿಕೆ ಟ್ರಸ್ಟ್ ಕೊಡಮಾಡುವ "ನೇಕಾರ ರತ್ನ" ಪ್ರಶಸ್ತಿಯನ್ನು ಸಂಜೀವ ಶೆಟ್ಟಿಗಾರ್ ರವರಿಗೆ ನೀಡಲಾಯಿತು,

ನೇಕಾರರಿಂದ ಮಗ್ಗದ ಸೀರೆಯುಟ್ಟು ಪ್ಯಾಶನ್ ಶೋ, ಲೋಲಾಕ್ಷ ಅವರಿಂದ ಜಾದು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸೇಲ್ಕೋ ಕಂಪನಿಯ ಡಿ.ಜಿ.ಎಂ ಗುರುಪ್ರಸಾದ್, ನೇಕಾರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್ ಕದಿಕೆ ಟ್ರಸ್ಟ್ ನ ಮಮತಾ ರೈ, ತಾಳಿಪಾಡಿ ನೇಕಾರ ಸಂಘದ ವ್ಯವಸ್ಥಾಪಕ ಮಾಧವ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

ಕದಿಕೆ ಟ್ರಸ್ಟ್ ನ ಚಿಕ್ಕಣ್ಣ ಶೆಟ್ಟಿ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.

ಜಿಲ್ಲಾಧಿಕಾರಿಗಳು ಕೈಮಗ್ಗದಿಂದ ಸೀರೆ ನೇಯ್ಯುವ ಬಗ್ಗೆ ಮಾಹಿತಿ ಪಡೆದು, ನೇಕಾರರೊಂದಿಗೆ ಮಾತುಕತೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ರೀತಿಯ ಕೈಮಗ್ಗದ ಸೀರೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು,

Edited By : Nagesh Gaonkar
Kshetra Samachara

Kshetra Samachara

16/08/2021 06:23 pm

Cinque Terre

9.85 K

Cinque Terre

1

ಸಂಬಂಧಿತ ಸುದ್ದಿ