ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಪ್ರಾರ್ಥನಾ ಕೇಂದ್ರಗಳ ಸ್ವಚ್ಛತೆ ಮೂಲಕ ಶಾಂತಿ ನೆಮ್ಮದಿ ಸಾಧ್ಯ: ಹರಿದಾಸ ಭಟ್

ಮುಲ್ಕಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಪಡುಪಣಂಬೂರಿನ ತೋಕೂರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ. ಕ್ಷೇ.ಧ. ಗ್ರಾ. ಯೋಜನೆಯ ಸದಸ್ಯರಿಂದ ನಡೆಸಲಾಯಿತು.

ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅದ್ಯಕ್ಷ ಹರಿದಾಸ್ ಭಟ್ ಮಾತನಾಡಿ ಪ್ರಾರ್ಥನಾ ಮಂದಿರಗಳ ಸ್ವಚ್ಛತೆಯ ಮೂಲಕ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸಲಿದ್ದು ದೇವರ ಪೂರ್ಣ ಅನುಗ್ರಹ ಸಾಧ್ಯ ಎಂದರು.

ಒಕ್ಕೂಟದ ಅದ್ಯಕ್ಷರಾದ ಶಶಿಕಲಾ, ಮೇಲ್ವಿಚಾರಕರಾದ ಚಂದ್ರಶೇಖರ ,ಮಾಜೀ ಅದ್ಯಕ್ಷ ಕರುಣಾಕರ್ ಹಾಗೂ ಸೇವಾಪ್ರತಿನಿದಿ ಸವಿತಾ ಶರತ್ ಬೆಳ್ಳಾಯರು, ದೇವಳದ ಸಿಬ್ಬಂದಿ ಉಮೇಶ್ ದೇವಾಡಿಗ, ಸಂಘದ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/08/2021 01:18 pm

Cinque Terre

9.1 K

Cinque Terre

1

ಸಂಬಂಧಿತ ಸುದ್ದಿ