ಮುಲ್ಕಿ: ಕಿಲ್ಪಾಡಿ ಕುಬೆವೂರು ಫ್ರೆಂಡ್ಸ್ ಬಳಗ ಮತ್ತು ಕುಮಾರಮಂಗಲ ಯುವಕ ಮಂಡಲದ ಸದಸ್ಯರಿಂದ ಕಿಲ್ಪಾಡಿ ಶ್ರೀ ಕುಮಾರಮಂಗಲ ಸುಬ್ರಮಣ್ಯ ದೇವಸ್ಥಾನ ಕಿಲ್ಪಾಡಿ ಅಂಗಣದಲ್ಲಿ ಶ್ರಮದಾನ ಮಾಡಲಾಯಿತು.
ಈ ಸಂದರ್ಭ ಮಾಜಿ ತಾಪಂ ಸದಸ್ಯ ಶರತ್ ಕುಬೆವೂರು ಮಾತನಾಡಿ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳುತ್ತಿದ್ದು ಶ್ರಮದಾನದ ಅಳಿಲು ಸೇವೆ ಮೂಲಕ ದೇವರ ಸೇವೆಯಿಂದ ಜೀವನ ಸಾರ್ಥಕ ಎಂದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಸದಸ್ಯರು ಹಾಗೂ ಕುಬೆವೂರು ಕಿಲ್ಪಾಡಿ ಫ್ರೆಂಡ್ಸ್ ಬಳಗದ ಸರ್ವ ಸದಸ್ಯರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/08/2021 05:09 pm