ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಪರ್ತಗಾಳಿ ಸ್ವಾಮೀಜಿಯವರ ಆರಾಧನಾ ಮಹೋತ್ಸವ

ಮುಲ್ಕಿ: ಸಮಾಜದ ಧಾರ್ಮಿಕತೆಯನ್ನು ಸ್ಥಿರಗೊಳಿಸಿ ಮುಂದಿನ ಪೀಳಿಗೆಗೆ ಸನಾತನ ಸಂಸ್ಕೃತಿಯ ಪರಂಪರೆಯ ಮೂಲ ತತ್ವ್ವವನ್ನು ಉಳಿಸಿ ಮುಂದುವರಿಸುವಲ್ಲಿ ಸ್ವಾಮೀಜಿಯ ಕೈಂಕರ್ಯ ಮಹತ್ತರವಾಗಿದೆಯೆಂದು ಕಿನ್ನಿಗೋಳಿ ಶ್ರೀ ರಾಮಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಗೀರೀಶ್ ಭಟ್ ಹೇಳಿದರು.

ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಇತ್ತಿಚೆಗೆ ಪರಂದಾಮಗೈದ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ್ ಮಠಾಧೀಶರಾದ ಶ್ರೀ ವಿದ್ಯಾರಾಜ ತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವ ದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಿನ್ನಿಗೋಳಿ ಜಿಎಸ್. ಬಿ ಅಧ್ಯಕ್ಷ ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದು, ನಿಕಟಪೂರ್ವ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಕೋಶಾಧಿಕಾರಿ ಸಚ್ಚಿದಾನಂದ ಭಟ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕಟೀಲು ಕೃಷ್ಣ ಪೈ, ಮಂದಿರ ಸಮಿತಿಯ ಉಪಾಧ್ಯಕ್ಷ ಅನಂತ ಕಾಮತ್, ಟ್ರಸ್ಟಿಗಳಾದ ರಾಘವೇಂದ್ರ ಪ್ರಭು, ರಾಜೇಶ್ ಕಾಮತ್ ನಾಮದೇವ ಕಾಮತ್, ಗುರುದತ್ತರಾವ್, ಗಣೇಶ್ ಪ್ರಸಾದ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಮಂದಿರದಲ್ಲಿ ಬೆಳಿಗ್ಗೆ ರಾಮತಾರಕ ಮಂತ್ರ ಹವನ, ಭಜನೆ , ಸಮಾರಾಧನೆ , ರಾತ್ರಿ ಭಜನೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.

Edited By : PublicNext Desk
Kshetra Samachara

Kshetra Samachara

01/08/2021 07:47 pm

Cinque Terre

3.92 K

Cinque Terre

0

ಸಂಬಂಧಿತ ಸುದ್ದಿ