ಕುಂದಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾದ ವಿವೇಕಾನಂದ ಹೆಚ್. ಕೆ ಅವರು ಮಾನವೀಯ ಮೌಲ್ಯಗಳ ಉದ್ದೀಪನ ಹಾಗೂ ಸಮಾಜವನ್ನು ಹತ್ತಿರದಿಂದ ಅರಿಯುವ ಸಲುವಾಗಿ ಕರ್ನಾಟಕದಾದ್ಯಂತ ಪಾದಯಾತ್ರೆ ಕೈಗೊಂಡಿದ್ದಾರೆ. ಅವರಿಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ.ಕುಂದಾಪುರಕ್ಕೆ ಪ್ರವೇಶಿಸುವ ಮೊದಲು ೨೬೯ನೇ ದಿನದ ಪಾದಯಾತ್ರೆ ಪೂರೈಸಿದ್ದು ಈವರೆಗೆ ೮೨೦೦ ಕಿ.ಮೀ ಕ್ರಮಿಸಿದ್ದಾರೆ.
ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿರುವ ವಿವೇಕಾನಂದ ಹೆಚ್. ಕೆ ಅವರೊಂದಿಗೆ ಸಂವಾದ ಆಯೋಜಿಸಿತ್ತು. ಸಂವಾದದಲ್ಲಿ ಮಾತನಾಡಿದ ಅವರು,ಮೌಲ್ಯಗಳು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಶಿಥಿಲವಾಗಿದೆ. ಹಣ, ಅಧಿಕಾರ ಹಾಗೂ ಪ್ರಚಾರದ ಆಧಾರದಲ್ಲಿಯೇ ಅದನ್ನು ಅಳೆಯಲಾಗುತ್ತಿದೆ. ಎಲ್ಲವನ್ನೂ ಕೈಯಂಚಲ್ಲಿ ಪಡೆಯುವಷ್ಟು ಸಲೀಸಾಗಿ ಮುಂದುವರಿದಿರುವ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಮರುಸ್ಥಾಪನೆಯಾಗಬೇಕಿದೆ ಎಂದು ಸಾಹಿತಿ, ಚಿಂತಕ ವಿವೇಕಾನಂದ ಹೆಚ್. ಕೆ ಹೇಳಿದರು.
ಹಿರಿಯ ಸಾಹಿತಿ ಎಎಸ್‌ಎನ್ ಹೆಬ್ಬಾರ್, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಪುರಸಭಾ ಸದಸ್ಯ ಗಿರೀಶ್ ದೇವಾಡಿಗ, ಜೋಯ್ ಜೆ. ಕರ್ವಾಲೋ ಮೊದಲಾದವರು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
29/07/2021 02:43 pm